ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜನಪರ ಕಾರ್ಯಗಳನ್ನು ಸದಾ ಟೀಕಿಸುವ, ದ್ವೇಷಿಸುವ ರಾಜ್ಯ ಬಿಜೆಪಿ ನಾಯಕರಿಗೆ ಅಸ್ಸಾಂ ಬಿಜೆಪಿ ಸರ್ಕಾರದ ನಡೆ ತಕ್ಕ ಉತ್ತರ ನೀಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಅಸ್ಸಾಂ ಬಿಜೆಪಿ ಸರ್ಕಾರ ಕರ್ನಾಟಕ ಸರ್ಕಾರದ ಮಾದರಿಯನ್ನು ಅನುಸರಿಸಿ ಅಸ್ಸಾಂ ರಾಜ್ಯವನ್ನು ಮತ್ತೊಂದು ಕರ್ನಾಟಕ ಮಾಡುವುದೇ ನನ್ನ ಗುರಿ ಎಂದು ಅಸ್ಸಾಂ ಬಿಜೆಪಿ ಮುಖ್ಯಮಂತ್ರಿಯೇ ಹೇಳಿದ್ದಾರೆ! ಎಂದು ಕಾಂಗ್ರೆಸ್ ತಿಳಿಸಿದೆ.
ಮೊಸರಲ್ಲಿ ಕಲ್ಲು ಹುಡುಕುವ, ಸದಾ ಜನರ ದಿಕ್ಕುತಪ್ಪಿಸುವ ಪ್ರಯತ್ನದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಇನ್ನಾದರೂ ತಮ್ಮ ಜನವಿರೋಧಿ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ತಾಕೀತು ಮಾಡಿದೆ.