ತೋಟಗಾರಿಕೆ ಯೋಜನೆಗಳಿಗೆ 8 ಲಕ್ಷ ರೂ.ತನಕ ರೈತರಿಗೆ ಸಹಾಯ ಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರದಲ್ಲಿ ಕರ್ನಾಟಕವು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಕ್ಷೇತ್ರದ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಉಪಯೋಜನೆಯಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ರೈತರಿಗೆ ಉತ್ತಮ ಗುಣಮಟ್ಟದ ಕಸಿ/ಸಸಿ ಗಿಡಗಳನ್ನು (Good quality planting material) ಒದಗಿಸುವ ಸಲುವಾಗಿ ನೀಡುತ್ತಿರುವ ಸೌಲಭ್ಯಗಳು.
ಸಸ್ಯಾಗಾರಗಳು (Nurseries) : 4 ಹೆಕ್ಟೇರ್ ಪ್ರದೇಶದಲ್ಲಿ ಹೈಟೆಕ್ ಮಾದರಿಯ ಸಸ್ಯಾಗಾರವನ್ನು ಸ್ಥಾಪಿಸಿ ವಾರ್ಷಿಕ ಕನಿಷ್ಠ 2 ಲಕ್ಷ ಕಸಿ ಗಿಡಗಳನ್ನು ಉತ್ಪಾದಿಸಲು ಶೇ.40 ರಂತೆ ರೂ.40 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ ಸಸ್ಯಾಗಾರವನ್ನು ಸ್ಥಾಪಿಸಿ, ವಾರ್ಷಿಕ ಕನಿಷ್ಠ 50,000 ಕಸಿ ಗಿಡಗಳನ್ನು ಉತ್ಪಾದಿಸಲು ಶೇ.50 ರಂತೆ ಗರಿಷ್ಠ ರೂ.7.50 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ.

ಹೊಸ ಅಂಗಾಂಶ ಕೃಷಿ ಘಟಕ ಸ್ಥಾಪನೆ (Establishment of New Tissue Culture Unit):
ಉತ್ತಮ ಗುಣಮಟ್ಟ ಹಾಗೂ ರೋಗ ನಿರೋಧಕಶಕ್ತಿ ಹೊಂದಿರುವ, ವಾರ್ಷಿಕ ಕನಿಷ್ಠ 25 ಲಕ್ಷ ಅಂಗಾಂಶ ಕೃಷಿ ಸಸಿಗಳನ್ನು ಉತ್ಪಾದಿಸಲು ಅಗತ್ಯವಾದ ಅಂಗಾಂಶ ಕೃಷಿ ಘಟಕ ಸ್ಥಾಪಿಸಲು ಶೇ.40ರಂತೆ ಗರಿಷ್ಠ 100.مه ಲಕ್ಷಗಳ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ.

ತರಕಾರಿ ಬೀಜೋತ್ಪಾದನೆ (Seed production for vegetables):
ಗರಿಷ್ಠ 5 ಹೆಕ್ಟೇರ್ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ತರಕಾರಿ ಬೆಳೆಗಳ ಬೀಜೋತ್ಪಾದನೆ ಮಾಡಲು ವೆಚ್ಚದ ಶೇ.35ರಂತೆ ಪ್ರತಿ ಹೆಕ್ಟೇರ್ಗೆ ರೂ.0.1225 ಲಕ್ಷಗಳಿಂದ ಗರಿಷ್ಠ ರೂ.0.525 ಲಕ್ಷಗಳವರೆಗೆ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ. ತೋಟಗಾರಿಕೆ ಬೆಳೆಗಳ ಬೀಜ ಸಂಸ್ಕರಣೆಗಾಗಿ ಮೂಲಭೂತಸೌಕರ್ಯ ಅಭಿವೃದ್ಧಿ (Seed Infrastructure for processing, packing, storage etc).  ತೋಟಗಾರಿಕೆ ಬೆಳೆಗಳ ಬಿತ್ತನೆ ಬೀಜಗಳ ಸಂಸ್ಕರಣೆ, ವಿಂಗಡಣೆ ಮತ್ತು ಗುಣಮಟ್ಟದ ಅಭಿವೃದ್ಧಿಗಾಗಿ ಬೀಜ ಸಂಸ್ಕರಣೆ ಘಟಕ ಮತ್ತು ಮೂಲಭೂತಸೌಕರ್ಯಗಳನ್ನು ಸ್ಥಾಪಿಸಲು ಶೇ.50ರಂತೆ ಗರಿಷ್ಠ ರೂ.100 ಲಕ್ಷಗಳವರೆಗೆ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ.

ಹೊಸ ತೋಟಗಳ ಸ್ಥಾಪನೆ:
ಬಹುವಾರ್ಷಿಕ ಹಣ್ಣಿನ ಬೆಳೆಗಳಾದ ದ್ರಾಕ್ಷಿ, ಮಾವು, ದಾಳಿಂಬೆ, ನಿಂಬೆ, ಕಿತ್ತಲೆ, ಮೂಸಂಬಿ, ಸೀಬೆ, ಬಾಳೆ, ಅನಾನಸ್, ಮುಂತಾದ ಹಣ್ಣಿನ ಬೆಳೆಗಳನ್ನು ವಿವಿಧ ಅಂತರಗಳಲ್ಲಿ ಹೊಸದಾಗಿ ಬೆಳೆದು ಪ್ರದೇಶ ವಿಸ್ತರಣೆ ಮಾಡಲು ಮತ್ತು ಅವುಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರ್ಗೆ ರೂ.0.10 ಲಕ್ಷಗಳಿಂದ ಗರಿಷ್ಠ ರೂ.0.50 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಪುಷ್ಪಗಳ ಬೆಳೆಗಳಲ್ಲಿ ಕತ್ತರಿಸಿದ ಪುಷ್ಪಗಳು, ಗಡ್ಡೆ ಜಾತಿಯ ಪುಷ್ಪಗಳು ಮತ್ತು ಬಿಡಿ ಪುಷ್ಪಗಳ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್ಗೆ ರೂ.0.10 ಲಕ್ಷಗಳಿಂದ ಗರಿಷ್ಠ ರೂ.0.40 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಸಾಂಬಾರು ಬೆಳೆಗಳು, ಸುಗಂಧಿತ ಬೆಳೆಗಳು ಮತ್ತು ತೋಟದ ಬೆಳೆಗಳ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್ಗೆ ರೂ.0.12 ಲಕ್ಷಗಳಿಂದ ಗರಿಷ್ಠ ರೂ.0.40 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಹಳೆಯ ತೋಟಗಳ ಪುನಃಶ್ಚೇತನ:
ಹಳೆಯ ಹಾಗೂ ಅನುತ್ಪಾದಕ ಮಾವು, ನಿಂಬೆ, ಮೂಸಂಬಿ, ಗೇರು ಮತ್ತು ಕಾಳು ಮೆಣಸು ಬೆಳೆಗಳ ತೋಟಗಳನ್ನು ಪುನಃಶ್ವೇತನಗೊಳಿಸುವ ಸಲುವಾಗಿ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ರೂ.0.40 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಅಣಬೆ ಕೃಷಿ (Mushrooms Production):
ಅಣಬೆ ಕೃಷಿಯನ್ನು ಉತ್ತೇಜಿಸಲು ಅಣಬೆ ಉತ್ಪಾದನಾ ಘಟಕ,  Spawn    ತಯಾರಿಕಾ ಘಟಕ ಹಾಗೂ ಕಾಂಪೋಸ್ಟ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ರೂ.6 ಲಕ್ಷಗಳಿಂದ ಗರಿಷ್ಠ ರೂ.8 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ನೀರಿನ ಮೂಲಗಳ ನಿರ್ಮಾಣ (Creation of Water resource):
ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ವೈಯಕ್ತಿಕ/ಸಮುದಾಯ ಕೃಷಿ ಹೊಂಡಗಳ ನಿರ್ಮಾಣಕ್ಕೆ ರೂ.0.75 ಲಕ್ಷಗಳಿಂದ ಗರಿಷ್ಠ ರೂ.4 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ಸಂರಕ್ಷಿತ ಬೇಸಾಯ (Protected Cultivation)
ಸಂರಕ್ಷಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿ ಉತ್ಕøಷ್ಟ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿವಿಧ ವಿನ್ಯಾಸಗಳ ಗರಿಷ್ಠ 4.000 .ಮೀ. ಹಸಿರು ಮನೆ (Green House) ಮತ್ತು ನೆರಳು ಪರದೆ (Shಚಿಜe e) ಘಟಕಗಳ ನಿರ್ಮಾಣಕ್ಕಾಗಿ ಶೇ.50 ರಂತೆ ರೂ.7.5 ಲಕ್ಷಗಳಿಂದ ಗರಿಷ್ಠ ರೂ.16.00 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ. ಟಿಲ್ಲರ್ಗಳನ್ನು ಖರೀದಿಸಲು ರೈತರಿಗೆ ರೂ.12,000 ಗಳಿಂದ ಗರಿಷ್ಠ ರೂ.1.00 ಲಕ್ಷಗಳವರೆಗೆ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ.

ಮಾನವ ಸಂಪನ್ಮೂಲ ಅಭಿವೃದ್ಧಿ:
ತೋಟಗಾರಿಕೆ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ನೂತನ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆಯಲು ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ತಾಕುಗಳಿಗೆ ಭೇಟಿ ನೀಡಲು ಮತ್ತು ರೈತರಿಗೆ ಬಗ್ಗೆ ಸೂಕ್ತ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಪ್ರತಿ ದಿನದ ಕಾರ್ಯಕ್ರಮಕ್ಕೆ ರೂ.1.000 ಗಳಿಂದ ರೂ.1.500 ಗಳವರೆಗೆ ವೆಚ್ಚ ಭರಿಸಲು ಅವಕಾಶವಿರುತ್ತದೆ.

ಕೊಲ್ಲೋತ್ತರ ನಿರ್ವಹಣೆ (PHM):
ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆಗಳು ಬಹು ಬೇಗನೆ ಹಾಳಾಗುವ ಉತ್ಪನ್ನಗಳಾಗಿದ್ದು, ಇವುಗಳ ಸಮರ್ಪಕ ನಿರ್ವಹಣೆಗಾಗಿ ವಿವಿಧ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಿ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ, ವಿಂಗಡಣೆ, ಶೇಖರಣೆ ಮತ್ತು ಮೌಲ್ಯವರ್ಧನೆ ಮಾಡುವುದರೊಂದಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಲು ಸಹಾಯಧನವನ್ನು ನೀಡಲಾಗುತ್ತಿದೆ.

ರೈತರು ತಮ್ಮ ಜಮೀನಿನಲ್ಲಿ ಪ್ಯಾಕ್ ಹೌಸ್ ನಿರ್ಮಾಣ ಮಾಡಲು ಪ್ರತಿ ಘಟಕಕ್ಕೆ ಗರಿಷ್ಠ ರೂ.2 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳನ್ನು ಕಟಾವಿನಿಂದ ಪ್ಯಾಕಿಂಗ್ರೆಗೆ ನಿರ್ವಹಣೆ ಮಾಡಲು ಅಗತ್ಯವಾದ ಇಂಟಿಗ್ರೇಟೆಡ್ ಪ್ಯಾಕ್ ಹೌಸ್ ಘಟಕವನ್ನು ಸ್ಥಾಪಿಸಲು ಗರಿಷ್ಠ ರೂ.17.50 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ. ಕಟಾವಿನ ನಂತರ ತೋಟಗಾರಿಕೆ ಬೆಳೆಗಳಲ್ಲಿರುವ ಕ್ಷೇತ್ರಮಟ್ಟದ ತಾಪಮಾನವನ್ನು ಕಡಿಮೆಗೊಳಿಸಲು ಅಗತ್ಯವಾದ Pಡಿe-ಛಿooiಟಿg ಘಟಕ ಸ್ಥಾಪಿಸಲು ಪ್ರತಿ ಘಟಕಕ್ಕೆ ಗರಿಷ್ಠ ರೂ.8.75 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ.

ಶೀಥಲಗೃಹ:
ತೋಟಗಾರಿಕೆ ಉತ್ಪನ್ನಗಳನ್ನು ಕೆಡದಂತೆ ದೀರ್ಘಕಾಲ ಸಂಗ್ರಹಿಸಿಡಲು ಅಗತ್ಯವಾದ ಶೀಥಲಗೃಹ (ಗರಿಷ್ಠ 5000 ಮೆಟ್ರಿಕ್ ಟನ್ ಶೇಖರಣಾ ಸಾಮಥ್ರ್ಯ ಹೊಂದಿರುವ) ನಿರ್ಮಾಣಕ್ಕೆ ಶೇ.35 ರಂತೆ ರೂ.140 ಲಕ್ಷಗಳಿಂದ ಗರಿಷ್ಠ ರೂ.175 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ಶೇಖರಿಸಿದ ತೋಟಗಾರಿಕೆ ಉತ್ಪನ್ನಗಳು ಕೆಡದಂತೆ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು 4 ರಿಂದ 9 ಮೆಟ್ರಿಕ್ ಟನ್ ಸಾಮಥ್ರ್ಯದ ಶೀಥಲವಾಹನ ಖರೀದಿಗಾಗಿ ಶೇ.35 ರಂತೆ ಗರಿಷ್ಠ ರೂ.9.10 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಅಗತ್ಯವಾದ ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಗರಿಷ್ಠ ರೂ.10 ಲಕ್ಷಗಳ ಸಹಾಯಧನ ನೀಡಲು ಅವಕಾಶವಿರುತ್ತದೆ.

ಮಾವು ಮತ್ತು ಬಾಳೆಹಣ್ಣುಗಳನ್ನು ಕಟಾವಿನ ನಂತರ ವೈಜ್ಞಾನಿಕವಾಗಿ ಮಾಗಿಸಿ ಮಾರುಕಟ್ಟೆಗೆ ಸರಬರಾಜು ಮಾಡುವ ಸಲುವಾಗಿ ಗರಿಷ್ಠ 300 ಮೆಟ್ರಿಕ್ ಟನ್ ಸಾಮಥ್ರ್ಯದ ಹಣ್ಣು ಮಾಗಿಸುವ ಘಟಕದ ನಿರ್ಮಾಣಕ್ಕೆ ಶೇ.35 ರಂತೆ ಗರಿಷ್ಠ ರೂ.105 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಕಟಾವಿನ ನಂತರ ಈರುಳ್ಳಿಯನ್ನು ಶೇಖರಿಸಿ ಉತ್ತಮ ಮಾರುಕಟ್ಟೆ ಬೆಲೆ ಪಡೆಯಲು ಉಪಯೋಗವಾಗುವ ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕದ ನಿರ್ಮಾಣಕ್ಕೆ ಶೇ.50 ರಂತೆ ಗರಿಷ್ಠ ರೂ.0.875 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಮಾರುಕಟ್ಟೆಗಳಲ್ಲಿ ಮೂಲಭೂಸೌಕರ್ಯಗಳ ಸ್ಥಾಪನೆ:
ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ರೀತಿಯ ಮಾರಾಟದ ವ್ಯವಸ್ಥೆ ಕಲ್ಪಿಸಿ ಉತ್ತಮ ಬೆಲೆ ದೊರಕಿಸಿಕೊಡಲು ಅಗತ್ಯವಾದ ವಿವಿಧ ಮಾದರಿಯ ಮಾರಕಟ್ಟೆಗಳ ನಿರ್ಮಾಣಕ್ಕಾಗಿ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ.

ಟರ್ಮಿನಲ್ ಮಾರುಕಟ್ಟೆ ನಿರ್ಮಾಣಕ್ಕಾಗಿ PPP (Public Private Partnership) ಅಡಿ ಶೇ.  25 ರಂತೆ ಗರಿಷ್ಠ ರೂ.50 ಕೋಟಿ ಸಹಾಯಧನವನ್ನು ನೀಡಲಾಗುತ್ತದೆ. ಸಗಟು ಮಾರುಕಟ್ಟೆ ನಿರ್ಮಾಣಕ್ಕಾಗಿ ಶೇ.25 ರಂತೆ ಗರಿಷ್ಠ ರೂ.25 ಕೋಟಿ ಸಹಾಯಧನವನ್ನು ನೀಡಲಾಗುತ್ತದೆ.

ಗ್ರಾಮೀಣ ಮಾರುಕಟ್ಟೆ ನಿರ್ಮಾಣಕ್ಕಾಗಿ ಶೇ.40 ರಂತೆ ಗರಿಷ್ಠ ರೂ.10 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ. ಚಿಲ್ಲರೆ ಮಾರುಕಟ್ಟೆ ನಿರ್ಮಾಣಕ್ಕಾಗಿ ಶೇ.35 ರಂತೆ ಗರಿಷ್ಠ ರೂ.5.25 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಉಪಯುಕ್ತವಾದ ಸ್ಥಿರ ಅಥವಾ ಚರ ತಳ್ಳು ಮಾರಾಟ ಗಾಡಿಗಳ ಖರೀದಿಗೆ ಶೇ.50 ರಂತೆ ಗರಿಷ್ಠ ರೂ.0.15 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

- Advertisement -  - Advertisement - 
Share This Article
error: Content is protected !!
";