ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದ್ಯಾ..? ಇಲ್ಲವಾ ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಏನ್ಮಾಡ್ತಿದ್ದೀರಿ..? ಎಂದು ಜೆಡಿಎಸ್ ಪ್ರಶ್ನಿಸಿದೆ.
ಬೀದರ್‌ನಲ್ಲಿ ಎಟಿಎಂ, ಮಂಗಳೂರಲ್ಲಿ ಬ್ಯಾಂಕ್‌ದರೋಡೆ, ಇಂದು ಮೈಸೂರಲ್ಲಿ ಹಾಡಹಗಲೇ ರೋಡ್‌ರಾಬರಿ ನಡೆದಿದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.
ಗೃಹ ಇಲಾಖೆ ಸಚಿವರು ಇದ್ದಾರೋ ಇಲ್ಲವೋ ? ಡಾ.ಜಿ.ಪರಮೇಶ್ವರ್ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಕ್ರಿಮಿನಲ್‌ಗಳು, ದರೋಡೆಕೋರರು ವಿಜೃಂಭಿಸುತ್ತಿದ್ದಾರೆ.
ಅಭಿವೃದ್ಧಿ ಮಾತು ಬಿಡಿ, ನಾಡಿನ ಜನರ ಸುರಕ್ಷತೆ ಕಾಪಾಡುವುದರಲ್ಲೇ ವಿಫಲವಾಗಿರುವ ಸರ್ಕಾರ, ಕಾನೂನು ಸುವ್ಯವಸ್ಥೆಯನ್ನೇ ಸಂಪೂರ್ಣ ಮರೆತಿದೆ.
ರಾಜ್ಯದಲ್ಲಿ ದಿನ ಬೆಳಗಾದರೆ ದರೋಡೆಗಳು, ಕೊಲೆಗಳು ನಡೆಯುತ್ತಿದ್ದು, ಜನಸಾಮಾನ್ಯರು ಭಯ, ಆತಂಕದಲ್ಲಿ ಬದುಕುವ ದುಸ್ಥಿತಿ ತಂದಿಟ್ಟಿದೆ ಸಿದ್ದರಾಮಯ್ಯನ ದುರಾಡಳಿತ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.