ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ದೀಪ ಬೆಳಗಿಸುವ ಮುಖಾಂತರ ಸರಳ ವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಪತ್ರಿಕ ವಿತರಕರ 4ನೇ ರಾಜ್ಯ ಸಮ್ಮೇಳನ ಅನುಭವ ಮಂಟಪ ಮುರುಗ ಮಠ ಚಿತ್ರದುರ್ಗದಲ್ಲಿ ನಡೆಯುವ ಸಮ್ಮೇಳನದ ಅವಹಾನ ಪತ್ರಿಕೆಯನ್ನು ವಿತರಿಸಿ ಈ ಕಾರ್ಯಕ್ರಮದಲ್ಲಿ ಎಲ್ಲಾ ಪತ್ರಿಕ ವಿತರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ವಿನಂತಿಸಿದರು.
ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಎನ್. ಮಾಲತೇಶ್ ಉಪಾಧ್ಯಕ್ಷ ರಾಮು ಜಿ ಪ್ರಧಾನ ಕಾರ್ಯದರ್ಶಿ ಮುಕ್ತರ ಅಹ್ಮದ್ (ನಜೀರ್) ಸಂಘಟನಾ ಕಾರ್ಯದರ್ಶಿ ಭದ್ರಾವತಿ ಪರಶುರಾಮ್ ರಾವ್ ಶಿವಮೊಗ್ಗ ವಿರೂಪಾಕ್ಷಿ ಸದಸ್ಯರಾದ ರಾಜ ವರ್ಮ ಜೈನ್, ಪ್ರಶಾಂತ, ಚಂದ್ರು, ನಾಗರಾಜ್ ನಾಯ್ಡು, ಪ್ರಾಣೇಶ್, ಜಗದೀಶ್ ಇನ್ನು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.