ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೊಡ್ಡೇರಿ ಸೇತುವೆ ಮಾರ್ಗಮಧ್ಯದಲ್ಲಿ ಮೋಟಾರ್ ಬೈಕ್ ಆಟೋರಿಕ್ಷಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಆರು ಜನರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಗಾಯಾಳು ಕುರುಬರಹಟ್ಟಿಯ ಮಂಜುನಾಥ ನೀಡಿದ ದೂರಿನ ಆಧಾರದ ಮೇಲೆ ಮೋಟಾರ್‌ಬೈಕ್ ಚಾಲಕ ದೇವರಮರಿಕುಂಟೆ ಕುಮಾರ್(೪೯) ಎಂಬುವವನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಪರಶುರಾಮಪುರದಿಂದ ಚಳ್ಳಕೆರೆ ಕಡೆಗೆ ಚಾಲಕ ಕುಮಾರ್ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ್ದಾನೆ.
ಆಟೋದಲ್ಲಿ ಸುಮಾ, ರಂಗಮ್ಮ, ಮಂಜುನಾಥ, ಸ್ವಾಮಿ, ಕುಮಾರ್, ರಮೇಶ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪಿಎಸ್‌ಐ ಧರೆಪ್ಪಬಾಳಪ್ಪದೊಡ್ಡಮನಿ ಪ್ರಕರಣ ದಾಖಲಿಸಿದ್ದಾರೆ.