ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ಮಿಸಿದ ಆಟೋ ಚಾಲಕ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಟೋ ಚಾಲಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ಮಿಸಿದ ಘಟನೆ ಚಿತ್ರದುರ್ಗದ ಗಾಂಧಿ‌ವೃತ್ತದಲ್ಲಿ ಶನಿವಾರ ರಾತ್ರಿ ನಡೆದಿದೆ.
‌ಮಾಳಪ್ಪನಹಟ್ಟಿ ಗ್ರಾಮದ ಆಟೋ ಚಾಲಕ ತಿಪ್ಪೇಸ್ವಾಮಿ(29) ಶನಿವಾರ ರಾತ್ರಿ 8.30ರ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಪೊಲೀಸರು ಆಟೋ ತಡೆದು ಡ್ರಂಕ್ ಡ್ರೈವ್ ತಪಾಸಣೆ ವೇಳೆ ಪೊಲೀಸರು ಮತ್ತು ಆಟೋ ಚಾಲಕ ಮಧ್ಯ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆಟೋಚಾಲಕ ಬೆಂಕಿ ಹಚ್ಚಿಕೊಂಡ ಘಟನೆಗೆ ಸಂಬಂಧಿಸಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು ಘಟನಾ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಘಟನೆಯ ಬಗ್ಗೆ ಮಾಹಿತಿ ಪಡೆದು ತನಿಖಾಧಿಕಾರಿಗಳಿಗೆ ಸೂಕ್ತ  ಸೂಚನೆಗಳನ್ನು ನೀಡಿದರು.

ಸುದ್ದಿಗೋಷ್ಠಿ:

- Advertisement - 

ಆಟೋ ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.

ಶನಿವಾರ ರಾತ್ರಿ 8:30 ಸಮಯದಲ್ಲಿ ಟ್ರಾಫಿಕ್ ಪೊಲೀಸರು ಕರ್ತವ್ಯ ಇದ್ದರೂ ಆಟೋ ಚಾಲಕ ತಿಪ್ಪೇಸ್ವಾಮಿ ನಿಯಮ ಮೀರಿ ಚಾಲನೆ ಮಾಡಿದ್ದರು. ಆಟೋ ಡ್ರೈವರ್ ಸರಿಯಾಗಿ ಉತ್ತರ ನೀಡದೇ ಎದುರು ಮಾತಾನಾಡಿದ್ದಾರೆ. ಕುಡಿದು ಆಟೋ ಚಾಲನೆ ಮಾಡುತ್ತಿರುವುದು ಕಂಡು ಬಂದಿದೆ. ಡ್ರಂಕ್ ಅಂಡ್ ಡ್ರೈವ್ ಕೇಸ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ನಮ್ಮ ಪೊಲೀಸ್ ಸಿಬ್ಬಂದಿಗಳ ಜೊತೆ ವಾಗ್ವಾದ ಮಾಡಿದ್ದಾನೆ ಎಂದು ತಿಳಿಸಿದರು.

- Advertisement - 

ಇಷ್ಟೇ ಅಲ್ಲದೆ ಚಾಲಕ ತಿಪ್ಪೇಸ್ವಾಮಿ ಅಲ್ಲಿಂದ ಆಟೋ ಬಿಟ್ಟು ಹೋಗಲು ಯತ್ನಿಸಿದ್ದಾರೆ. ಆಟೋದಲ್ಲಿ ಕೂರಿಸಲು ನಮ್ಮ ಸಿಬ್ಬಂದಿಗಳು ಯತ್ನಿಸಿದ್ದಾರೆ.

ಆಗ ಆತ ಆಟೋ ಬಿಟ್ಟು ಅಲ್ಲಿಂದ ಹೋಗುತ್ತಾನೆ. ಪೊಲೀಸರ ನಡುವೆ ಹಾಗೂ ಆಟೋ ‌ಡ್ರೈವರ್ ನಡುವೆ ಮಾತಿನ ಚಕಮಕಿ ಆಗಿದೆ. ಆಟೋ ಬಿಟ್ಟು ಹೋದ ಒಂದು ಗಂಟೆ ಬಳಿಕ ಗಾಂಧಿ ವೃತ್ತಕ್ಕೆ ಬಂದಿದ್ದಾನೆ. ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಘಟನೆಯಲ್ಲಿ ಶೇ 50ರಷ್ಟು ದೇಹ ಸುಟ್ಟು ಗಾಯಗಳಾಗಿದೆ ಎಂದು ಎಸ್ಪಿ ತಿಳಿಸಿದರು.

ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್.ಎಸ್. ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಈ ವಿಷಯದಲ್ಲಿ ಕೆಲವೂ ಗೊಂದಲ ಸೃಷ್ಠಿಯಾಗಿದೆ ಎಂದು ಎಸ್ಪಿ ತಿಳಿಸಿದರು.

ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ. ಆದರೆ ಈತ ಅವರನ್ನ ಎದುರಿಸಲು ಹೋಗಿದ್ದಾನೆ. ಎಎಸ್ಪಿ ಕಡೆಯಿಂದ ಪ್ರಕರಣ ತನಿಖೆ ಮಾಡಿ, ಪೊಲೀಸರ ತಪ್ಪು ಕಂಡು ಬಂದರೆ ಕ್ರಮಕೈಗೊಳ್ಳುತ್ತೇವೆ. PC & HC ಇಬ್ಬರು ಆತನನ್ನ ಪರೀಕ್ಷೆ ಮಾಡಿಸಲು ತಡೆಯುತ್ತಾರೆ.

ಸಾರ್ವಜನಿಕ ಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದು ಕುರಿತು ಕೇಸ್ ಮಾಡುತ್ತೇವೆ. ಟ್ರಾಫಿಕ್ ನಿಯಮ ಮೀರಿದಾಗ ನಾವು ದಂಡ ಹಾಕುತ್ತೇವೆ. ಇದನ್ನ ಸಾರ್ವಜನಿಕರು ಬದಲಾವಣೆ ಮಾಡಿಕೊಳ್ಳಬೇಕು. ಈ ಕೇಸ್ ನಲ್ಲಿ ಪೊಲೀಸರ ದೌರ್ಜನ್ಯಕ್ಕಿಂತ ಸಾರ್ವಜನಿಕರ ಉದಾಸೀನತೆ ಕಂಡು ಬರುತ್ತೆ. ಗಾಂಧಿ ವೃತ್ತದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವವರೆಗೂ ಯಾರು ತಡೆಯೋದಿಲ್ಲ. ಬೆಂಕಿ ಹಚ್ಚಿಕೊಂಡಾಗ ಕೂಡಾ ಯಾರೂ ತುರ್ತಾಗಿ ರಕ್ಷಣೆ ಮಾಡಿಲ್ಲ ಪೊಲೀಸರನ್ನ ಹೆದರಿಸಲು ಹೋಗಿದ್ದಾನೆ, ದುರಾದೃಷ್ಟವಶಾತ್ ಈತರ ಆಗಿದೆ ಎಂದು ಅವರು ತಿಳಿಸಿದರು.

ಈ ಕೇಸ್ ನಲ್ಲಿ ನಮ್ಮ ಸಿಬ್ಬಂದಿಗಳ ತಪ್ಪಿದ್ರು ಕ್ರಮ ಜರುಗಿಸುತ್ತೇವೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದೆ. ನಾವು ವೈದ್ಯರ ಸಂಪರ್ಕದಲ್ಲಿ ಇದ್ದೇವೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಶಿಪ್ಟ್ ಮಾಡಲು ನಾವು ರೆಡಿ ಇದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಂಡಾರು ತಿಳಿಸಿದರು.

Share This Article
error: Content is protected !!
";