ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಟ್ಟಡ ನಕ್ಷೆ ಮಂಜೂರಾತಿ ವಿಚಾರದಲ್ಲಿ ಬೆಂಗಳೂರು ನಗರದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ನಂಬಿಕೆ ನಕ್ಷೆ ಯೋಜನೆ ಜಾರಿಗೆ ತರಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
‘ನಂಬಿಕೆ ನಕ್ಷೆ‘ ಯೋಜನೆಯಡಿ 50 x 80 ಅಡಿ ಅಳತೆಯವರೆಗಿನ ಕಟ್ಟಡಗಳಿಗೆ ಸ್ವಯಂಚಾಲಿತವಾಗಿ 15 ದಿನಗಳಲ್ಲಿ ನಕ್ಷೆಗೆ ಮಂಜೂರಾತಿ ಸಿಗಲಿದೆ ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದಾರೆ.