ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಧರ್ಮಪುರ ಹೋಬಳಿ ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಖಾದ್ಯ ಎಣ್ಣೆ ಕಾಳು ಅಭಿಯಾನ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಕುರಿತು ಗುರುವಾರ ಹಿರಿಯೂರು ತಾಲೂಕಿನ ಕಣಜನಹಳ್ಳಿಯ ಭೀಮಣ್ಣ ಇವರ ಜಮೀನಿಲ್ಲಿ ನೆರವೇರಿಸಲಾಯಿತು.
ರಾಷ್ಟ್ರೀಯ ಖಾದ್ಯ ಎಣ್ಣೆಕಾಳು ಅಭಿಯಾನ ಯೋಜನೆ (NMEO-OP) ಎನ್ನುವುದು ಖಾದ್ಯ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಒಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಈ ಯೋಜನೆಯು ಎಣ್ಣೆಕಾಳು ಮತ್ತು ಎಣ್ಣೆತಾಳೆ ಕೃಷಿ ವಿಸ್ತರಣೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ರೈತರಿಗೆ ಮಾರುಕಟ್ಟೆ ಬೆಂಬಲ ನೀಡುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ.
ಯೋಜನೆಯ ಮುಖ್ಯ ಉದ್ದೇಶಗಳು-
ಉತ್ಪಾದನೆ ಹೆಚ್ಚಳ: ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವುದು.
ಆಮದು ಇಳಿಕೆ: ಆಮದುಗಳನ್ನು ಕಡಿಮೆ ಮಾಡುವ ಮೂಲಕ ಖಾದ್ಯ ತೈಲಗಳಲ್ಲಿ ಸ್ವಾವಲಂಬನೆ ಸಾಧಿಸುವುದು.
ರೈತರಿಗೆ ಆದಾಯ: ಎಣ್ಣೆಕಾಳು ಮತ್ತು ಎಣ್ಣೆತಾಳೆ ಕೃಷಿ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು.
ಪ್ರದೇಶ ವಿಸ್ತರಣೆ: ಎಣ್ಣೆಕಾಳು ಮತ್ತು ಎಣ್ಣೆತಾಳೆ ಬೆಳೆಯುವ ಪ್ರದೇಶವನ್ನು ಹೆಚ್ಚಿಸುವುದು, ವಿಶೇಷವಾಗಿ ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ.
ತಂತ್ರಜ್ಞಾನ ಬಳಕೆ: ಹೆಚ್ಚಿನ ಇಳುವರಿ ಬೀಜಗಳು, ಜೀನ್ ಎಡಿಟಿಂಗ್ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಬಳಸುವುದು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ-
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ 2013ರ ಕಾಯಿದೆಯಾಗಿದ್ದು ಭಾರತದ ಜನಸಂಖ್ಯೆಯ ಸರಿಸುಮಾರು ಮೂರನೇ ಎರಡರಷ್ಟು ಜನರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ಕಾಯಿದೆಯಡಿ, ಬಡ ಕುಟುಂಬಗಳಿಗೆ ಅಕ್ಕಿ, ಗೋಧಿ, ಮತ್ತು ಒರಟು ಧಾನ್ಯಗಳನ್ನು ಅತಿ ಕಡಿಮೆ ದರದಲ್ಲಿ ನೀಡಲಾಗುತ್ತದೆ.
ಇದಲ್ಲದೆ, ಕೇಂದ್ರ ಸರ್ಕಾರವು ಇತ್ತೀಚೆಗೆ ಆದ್ಯತಾ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ಒದಗಿಸುವ ಯೋಜನೆಯನ್ನು 2024ರ ಜನವರಿ 1 ರಿಂದ ಐದು ವರ್ಷಗಳವರೆಗೆ ವಿಸ್ತರಿಸಿದೆ.
ಅಂತ್ಯೋದಯ ಅನ್ನ ಯೋಜನೆ: ಅತ್ಯಂತ ಬಡ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳು ಉಚಿತವಾಗಿ ಸಿಗುತ್ತವೆ.
ಆದ್ಯತಾ ಕುಟುಂಬಗಳು: ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳು ಉಚಿತವಾಗಿ ಸಿಗುತ್ತವೆ.
ಸಬ್ಸಿಡಿ ದರ: ಕಾಯಿದೆಯ ಪ್ರಕಾರ, ಫಲಾನುಭವಿಗಳು ಸಾಮಾನ್ಯವಾಗಿ ಪ್ರತಿ ಕೆಜಿಗೆ ಅಕ್ಕಿ 3, ಗೋಧಿಗೆ 2 ಮತ್ತು ಒರಟು ಧಾನ್ಯಗಳಿಗೆ 1 ದರದಲ್ಲಿ ಪಡೆಯುತ್ತಿದ್ದರು. ಆದರೆ, ಈಗ ಉಚಿತ ವಿತರಣೆ ಮಾಡಲಾಗುತ್ತಿದೆ.
ಈ ಎರಡು ಕಾರ್ಯಕ್ರಮಗಳ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಎಂ.ಎಸ್ ಕಿರಣ್ ಕುಮಾರ್, ಉಪ ಕೃಷಿ ನಿರ್ದೇಶಕ ಚಳ್ಳಕೆರೆ ಉಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್, ಶಿವಮೂರ್ತಿ, ಶಿವಣ್ಣ, ವೀರೇಶ್, ತಿಪ್ಪೇಸ್ವಾಮಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

