ಚಂದ್ರವಳ್ಳಿ ನ್ಯೂಸ್, ಕಾನ ಹೊಸಹಳ್ಳಿ :
ವಿದ್ಯುತ್ ಕಂಬದ ಮೇಲೆ ಹಾಗೂ ವಿದ್ಯುತ್ ಸರಬರಾಜು ಆಗುವ ವಿದ್ಯುತ್ ತಂತಿಯ ಮೇಲೆ ಆವರಿಸಿದ ಬಳ್ಳಿಯನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸಮೀಪದ ಗುಂಡು ಮುಣು ಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದ ಅಂಗನವಾಡಿ ಬಿ ಕೇಂದ್ರದ ಮುಂಭಾಗದಲ್ಲಿ ವಿದ್ಯುತ್ ಕಂಬವನ್ನು ಅಳವಡಿಸಿದ್ದು ಸುಮಾರು ವರ್ಷಗಳೇ ಆಗಿವೆ. ವಿದ್ಯುತ್ ಕಂಬವು ವಾಲಿದ್ದು ಆ ಕಂಬಕ್ಕೆ ಮತ್ತು ವಿದ್ಯುತ್ ಹರಿಯು ವತಂತಿಗೆ ಬಳ್ಳಿಯು ಆವರಿಸಿಕೊಂಡಿದೆ ವಿದ್ಯುತ್ ಸರಬರಾಜು ಆಗುವಲ್ಲಿ ಸಮಸ್ಯೆ ಉಂಟಾಗುವುದು.
ಈ ಶಾಲೆಯ ಮುಂಭಾಗದಲ್ಲಿ ಸಾರ್ವಜನಿಕರು ಉಪಯೋಗಿಸುವ ನೀರಿನ ಮಿನಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ ಸಾರ್ವಜನಿಕರು ನೀರಿಗಾಗಿ ಇಲ್ಲಿ ಬರುತ್ತಾರೆ. ಹಾಗೂ ಶಾಲೆಯ ಮಕ್ಕಳು ಕೂಡ ಹೊರಗಡೆ ಬಂದು ಆಟವಾಡುತ್ತಾರೆ.
ನೀರಿಗೆ ಬರುವ ಸಾರ್ವಜನಿಕರಿಗೂ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಉಂಟಾಗಬಹುದು ಆದ್ದರಿಂದ ಈಗ ಮಳೆಗಾಲ ಆದ್ದರಿಂದ ನೀರಿನ ಮೂಲಕ ವಿದ್ಯುತ್ ಹರಿಯುವ ಸಂಭವ ಹೆಚ್ಚಾಗಿದೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿದ್ಯುತ್ ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳಪರಿಶಿಲಿಸಿ ಶೀಘ್ರದಲ್ಲಿ ವಿದ್ಯುತ್ ಕಂಬಕ್ಕೆ ಆವರಿಸಿದ ಬಳ್ಳಿಯನ್ನು ತೆರವುಗೊಳಿಸಿ ವಾಲಿರುವ ವಿದ್ಯುತ್ ಕಂಬವನ್ನು ಸರಿಪಡಿಸಿ ಇಲ್ಲಿ ಆಗುವ ತೊಂದರೆಗಳನ್ನು ತಪ್ಪಿಸುವಂತೆ ಸಾರ್ವಜನಿಕರು ಸಂಬಂಧಪಟ್ಟ ಕೆಇಬಿ ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ ಎಂದು ಸಿ ಅರುಣ್ ಕುಮಾರ್ ತಿಳಿಸಿದ್ದಾರೆ.