ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೆಹಲಿಯಲ್ಲಿ ಇತ್ತೀಚೆಗೆ ಎಂವಿಎಲ್ಎ ಟ್ರಸ್ಟ್ ವತಿಯಿಂದ ನಡೆದ ಜಾಗತಿಕ ಶಿಕ್ಷಕ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಚಿದಾನಂದ ಸ್ವಾಮಿ ಅವರಿಗೆ ಎಂವಿಎಲ್‍ಎ ಗ್ಲೋಬಲ್ ಬೆಸ್ಟ್ ಡಿಪಿಇಒ ರೋಲ್ ಮಾಡೆಲ್ ಅವಾರ್ಡ್-2025 ನೀಡಿ ಗೌರವಿಸಲಾಗಿದೆ.
ಕ್ರಿಯಾಶೀಲ ಕತೃತ್ವಶಕ್ತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಪ್ರೇರೇಪಿಸಿ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಅತ್ಯುತ್ತಮ ಮಾರ್ಗದರ್ಶಕರಾಗಿ ಚಿದಾನಂದ ಸ್ವಾಮಿ ನಿರಂತರವಾಗಿ ಶ್ರಮಿಸಿದ್ದಾರೆ.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಚಿದಾನಂದ ಸ್ವಾಮಿ ಅವರ ಸಾಧನೆಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ಹಾಗೂ ಆಡಳಿತ ವರ್ಗದವರು ಅಭಿನಂದಿಸಿದ್ದಾರೆ.

