ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೈನಂದಿನ ಆಹಾರದ ಭಾಗವಾಗಿರುವ ಹಾಲಿನ ಮಹತ್ವ ಹಾಗೂ ಮೌಲ್ಯವರ್ಧನೆ ಕುರಿತು ಜಗತ್ತಿನಾದ್ಯಂತ ಅರಿವು ಮೂಡಿಸಲು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಹಾಲಿನ ಪೌಷ್ಟಿಕ ಗುಣಗಳು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವುದರಿಂದ ನಮ್ಮ ಸರ್ಕಾರ ‘ಕ್ಷೀರ ಭಾಗ್ಯ‘ದಂಥ ಯೋಜನೆಗಳನ್ನು ತಂದಿದೆ. ಹೈನುಗಾರರ ಬದುಕನ್ನು ಹಸನಾಗಿಸಲು ಹಲವಾರು ಯೋಜನೆಗಳನ್ನು ರೂಪಿಸಿದೆ. ನಮ್ಮ ಸರ್ಕಾರ ಸದಾ ರೈತ ಪರ ಸರ್ಕಾರ ಎಂದು ಡಿಸಿಎಂ ಅವರು ತಿಳಿಸಿದರು.
ಹಾಲು ಉತ್ಪಾದಕರು ಹಾಗೂ ಗ್ರಾಹಕರಿಗೂ ವಿಶ್ವ ಹಾಲು ದಿನದ ಶುಭಾಶಯಗಳನ್ನು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.