ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಪುಷ್ಪಾಂಡಜ ಗುರುಕುಲ ಆಶ್ರಮದಲ್ಲಿ ಆಯೋಜಿಸಿದ್ದ ಮದ್ಯ ವರ್ಜನ ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ ಕ್ಷಯ ರೋಗ ಘಟಕದ ವತಿಯಿಂದ ಶಿಬಿರಾರ್ಥಿಗಳಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಟಿ ಬಿ ಚಿಕಿತ್ಸಾ ಮೇಲ್ವಿಚಾರಕ ಆನಂದ್ ಮಾತನಾಡಿ ಮದ್ಯ ವ್ಯಸನಿಗಳಲ್ಲಿ ಟಿ ಬಿ ಕಾಯಿಲೆಯು ಹೆಚ್ಚು ಬೇಗನೆ ಬರುವ ಸಾದ್ಯತೆಯಿರುತ್ತದೆ ಆದ್ದರಿಂದ ಮದ್ಯಪಾನ ಮತ್ತು ತಂಬಾಕು ಉತ್ಪನ್ನಗಳನ್ನು ಸೇವಿಸುವುದನ್ನು ಬಿಡಬೇಕು ಎಂದು ತಿಳಿಸಿದರು ಮತ್ತು ಈಗಾಗಲೇ ಯಾರಿಗಾದರೂ ಟಿ ಬಿ ಲಕ್ಷಣಗಳಾದ ಸತತ ಕೆಮ್ಮು , ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಂಡುಬಂದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಮೋಜು ಮಸ್ತಿ ಮುಂತಾದ ಹಲವಾರು ಕಾರಣಗಳಿಂದ ಮದ್ಯ ಪಾನ ಶುರುಮಾಡಿ ನಂತರ ವ್ಯಸನಿಗಳಗಿ ಜೀವನವನ್ನೇ ಹಾಳುಮಾಡಿಕೊಳ್ಳಿದ್ದಾರೆ ಇಂತಹ ಶಿಬಿರಗಳು ಆಯೋಜಿಸುವುದರಿಂದ ವ್ಯಸನ ಮುಕ್ತರನ್ನಾಗಿ ಪರಿವರ್ತಿಸಬಹುದೆಂದು ನವೋದಯ ಟ್ರಸ್ಟಿನ ಜನಾರ್ದನ ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ತಾ! ಪ್ರದಾನ ಕಾರ್ಯದರ್ಶಿ ರಾಜಘಟ್ಟ ಗಣೇಶ್,ಯುವರಾಜ್, ಕ್ಷಯ ರೋಗ ವಿಭಾಗದ ಸಂದರ್ಶಕರು ಸಾರ್ವಜನಿಕರು ಉಪಸ್ಥಿತರಿದ್ದರು.

