ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಈಗಾಗಲೇ ಕೈಗಾರಿಕೆ ನಡೆಸುವಂತಹ ಉದ್ಯಮೆದಾರರು ದುಡಿಮೆ ಬಂಡವಾಳ ಕೊರತೆಯಾದಲ್ಲಿ ಖಿಖeಆನಲ್ಲಿ ನೋಂದಣಿ ಮಾಡಿಕೊಂಡು, ಉತ್ಪಾದಿಸಿದ ವಸ್ತುಗಳಿಗೆ ಬೇಡಿಕೆನುಗುಣವಾಗಿ ಬಿಲ್‍ಗಳನ್ನು ತಯಾರಿಸಿ ಆನ್‍ಲೈನ್ ಮುಖಾಂತರ ಅಪ್‍ಲೋಡ್ ಮಾಡಿದಲ್ಲಿ ದುಡಿಮೆ ಬಂಡವಾಳಕ್ಕೆ ಅರ್ಹ ಮೊತ್ತವನ್ನು ಬ್ಯಾಂಕುಗಳಿಂದ ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಯೋಜನೆ ರೂಪಿಸಿದೆ ಎಂದು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾ) ಸಿಇಒ ಸಿದ್ದರಾಜು ಹೇಳಿದರು.
ನಗರದ ದುರ್ಗದ ಸಿರಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್) ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಆರ್‍ಎಎಂಪಿ ಯೋಜನೆಯಡಿಯಲ್ಲಿ ಕೈಗಾರಿಕೋದ್ಯಮಿಗಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿ, ಬ್ಯಾಂಕಿನ ವಹಿವಾಟಿನ ಬಗ್ಗೆ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಮತ್ತು ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಎಲ್ಲಾ ಖಾತೆದಾರರು ವರ್ಷಕ್ಕೆ ಕನಿಷ್ಠ ರೂ.20 ಮತ್ತು ರೂ.460 ಗಳಂತೆ ಪಾವತಿಸಿದಲ್ಲಿ ಖಾತೆದಾರರು ಆಕಸ್ಮಿಕ/ಸಹಜ ಮರಣ ಹೊಂದಿದಲ್ಲಿ, ರೂ. 2.00 ಲಕ್ಷಗಳವರೆಗೆ ಇನ್ಸೂರೆನ್ಸ್ ಪಡೆಯಲು ಅವಕಾಶವಿರುವುದರಿಂದ ಎಲ್ಲಾ ಖಾತೆದಾರರು ಇದರ ಸದುಪಯೋಗ ಪಡೆಯಬೇಕೆಂದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಮಾನ್ಯ ವರ್ಗದ ಕೈಗಾರಿಕೋದ್ಯಮಿಗಳಿಗೆ ಶೇ.5.5ರ ಬಡ್ಡಿ ದರದಲ್ಲಿ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಉದ್ಯಮಿದಾರರಿಗೆ ಶೇ.4ರ ಬಡ್ಡಿ ದರದಲ್ಲಿ ರೂ.5.00 ಲಕ್ಷದಿಂದ 10.00 ಕೋಟಿಗಳವರೆಗೆ ಸಾಲ ನೀಡಲಾಗುವುದೆಂದು ತಿಳಿಸಿ, ಇದರ ಪ್ರಯೋಜನವನ್ನು ಉದ್ಯಮಿದಾರರು ಪಡೆದುಕೊಳ್ಳಬೇಕು ಎಂದು ಕೆಎಸ್‍ಎಫ್‍ಸಿ ವ್ಯವಸ್ಥಾಪಕ ಆರ್.ಬಾಬು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಂಟಿ ನಿರ್ದೇಶಕ ಬಿ.ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, 2025-23ರ ಕೈಗಾರಿಕಾ ನೀತಿಯಲ್ಲಿ ದೊರೆಯುವ ರಿಯಾಯಿತಿ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿದೇಶಕ ಬಿ.ಕೆ.ಮಂಜುನಾಥಸ್ವಾಮಿ ಸೇರಿದಂತೆ ಸುಮಾರು 180 ಹಾಲಿ ಉದ್ದಿಮೆದಾರರು ಹಾಗೂ ಭಾವಿ ಉದ್ದಿಮೆದಾರರು ಭಾಗವಹಿಸಿದ್ದರು.

