ವಿಷ ಜಂತು ಹಾವುಗಳ ಕುರಿತು ಅರಿವು ಕಾರ್ಯಾಗಾರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರ ದೊಡ್ಡರಾಯಪ್ಪನಹಳ್ಳಿ ವತಿಯಿಂದ ಭೂಮೇನಹಳ್ಳಿ ಗ್ರಾಮದಲ್ಲಿ ಹಾವುಗಳ ಕುರಿತು ಅರಿವು ಕಾರ್ಯಾಗಾರ ಏರ್ಪಡಿಸಲಾಗಿತ್ತು .
 

ಈ ಗ್ರಾಮವು ಅರಣ್ಯ ಪ್ರದೇಶಕ್ಕೆ ಆಂಟಿಕೊಂಡಿರುವ ಗ್ರಾಮವಾಗಿದ್ದು ಮಾನವಸಂಕುಲ ಮತ್ತು ವನ್ಯಜೀವಿ ಮುಖಾ ಮುಖಿ ಆಗುವ ಸಂಭವ ಇರುವುದರಿಂದ ಈ ಗ್ರಾಮದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಇದೇ ಸಂದರ್ಭದಲ್ಲಿ ಪರಿಸರ ತಜ್ಞ ಚಿನ್ಮಯ್ ಸಿ ಮಳಿಯೆ ಹಾವುಗಳ ಬಗ್ಗೆ ಸಮಗ್ರ ಉಪನ್ಯಾಸ ನೀಡಿದರು.

ವಿಷಕಾರಿ ಹಾಗೂ ವಿಷರಹಿತ ಹಾವುಗಳ ನಡುವಿನ ವ್ಯತ್ಯಾಸ, ಕೃಷಿ ಚಟುವಟಿಕೆಗಳ ಸಮಯದಲ್ಲಿ ತೆಗೆದು ಕೊಳ್ಳಬಹುದಾದ ಮುಂಜಾಗ್ರತ ಕ್ರಮಗಳು, ಹಾವುಗಳ ಬಗ್ಗೆ ಇರುವ ತಪ್ಪು ನಂಬಿಕೆಗಳು, ಹಾವುಗಳಿಗಿರುವ ಕಾನೂನಾತ್ಮಕ ರಕ್ಷಣೆ ಮತ್ತು ಸುತ್ತಮುತ್ತ ಸಾಮಾನ್ಯವಾಗಿ ಕಾಣುವ ಹಾವುಗಳ ಬಗ್ಗೆ ತಿಳಿಸಿದರು.

 ನವೋದಯ ಟ್ರಸ್ಟಿನ ಕಾರ್ಯಕ್ರಮ ಸಂಯೋಜಕರಾದ ಜನಾರ್ದನ್ ಮಾತನಾಡಿ ಯಾವುದೇ ರೀತಿಯ ಹಾವು ಕಚ್ಚಿದಾಗ ಮಂತ್ರ ಹಾಕಿಸುವುದಾಗಲಿ,  ಬಾಯಿಯಿಂದ ರಕ್ತ ಹೀರುವುದಾಗಲಿ ಅಥವಾ ಇನ್ನಾವುದೇ ರೀತಿಯಾಗಿ ಅವೈಜ್ಞಾನಿಕವಾಗಿ ವರ್ತಿಸದೆ (Golden Time ) ಸೂಕ್ತ ಸಮಯದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಮಹಿಳೆಯರು ಮತ್ತು ಯುವಜನತೆ ಹೆಚ್ಚಿನ ಆಸಕ್ತಿ ತೋರಿಸಿದರು. ಈ ಸಂದರ್ಭದಲ್ಲಿ ಸುಮಾರು 50 ಕ್ಕೂ ಹೆಚ್ಚು ಗ್ರಾಮಸ್ಥರು, ನವೋದಯ ಚಾರಿಟಬಲ್ ಟ್ರಸ್ಟಿನ ಚೇತನ್ ಜೆ, ಲೋಹಿತ್ ವೈ ಟಿ, ಡಬ್ಲ್ಯೂ ಎ ಎನ್ ಸಿ ಯ ನಿಶಾ ಬಿ ಜಿ, ನವೀನ್ ಐಯ್ಯೇರ್ ಮತ್ತು ಆಶಾ ಎಸ್, ಸ್ವಯಂಸೇವಕರಾದ ಸಂಜಯ್ ದೇವಾ, ಪಾರ್ಥಿಬನ್ ಇದ್ದರು.

 

 

Share This Article
error: Content is protected !!
";