ಆಯುಷ್ ಇಲಾಖೆಯ ಚ್ಯವನ್ ಪ್ರಾಶ್ ಆರೋಗ್ಯಕರ-ಡಾ.ಚಂದ್ರಕಾಂತ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚ್ಯವನ ಪ್ರಾಶವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಯಾವುದೇ ರೋಗ ವಾಸಿಯಾಗಲು ಸಹಕರಿಸುತ್ತದೆ. ಆಯುಷ್ ಇಲಾಖೆಯ ಚ್ಯವನ್ ಪ್ರಾಶ್ ಆರೋಗ್ಯಕರ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಹೇಳಿದರು.

- Advertisement - 

ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಶಾ ಮಾಸಿಕ ಸಭೆಯಲ್ಲಿ ಕ್ಷಯರೋಗ ನಿಯಂತ್ರಿಸಲು ಚಿಕಿತ್ಸೆ ಪಡೆಯುತ್ತಿರುವ ಫಲಾನುಭವಿಗಳಿಗೆ ಆಯುಷ್ ಪುಷ್ಠಿಕರ ಔಷಧಿ ಚ್ಯವನ್ ಪ್ರಾಶ್ ವಿತರಿಸಿ ಅವರು ಮಾತನಾಡಿದರು.

- Advertisement - 

ಕ್ಷಯರೋಗಿಗಳಿಗೆ ಚ್ಯವನ ಪ್ರಾಶ್ ಉತ್ತಮ ಪೂರಕ ಔಷಧಿ. ಆರೋಗ್ಯ ಇಲಾಖೆ ವತಿಯಿಂದ ನೀಡುವ ಮಾತ್ರೆಗಳ ಜೊತೆಗೆ ಔಷಧಿಯನ್ನು ಸೇವಿಸುವುದರಿಂದ ಶೀಘ್ರ  ಗುಣಮುಖ ಹೊಂದಬಹುದು ಎಂದು ತಿಳಿಸಿದರು.
ಆಯುಷ್ ವೈದ್ಯರಾದ ಡಾ. ಶಿವಕುಮಾರ್ ಮಾತನಾಡಿ, ಎಲ್ಲಾ ವೈದ್ಯ ಪದ್ಧತಿಗಳು ಕೈಜೋಡಿಸಿ ಸಂಯುಕ್ತವಾಗಿ ಪ್ರಯತ್ನಿಸಿದಾಗ ಸಮುದಾಯದಲ್ಲಿ ಉತ್ತಮ ಆರೋಗ್ಯ ನೀಡಲು ಸಾಧ್ಯ. ಚ್ಯವನ ಪ್ರಾಶವು ಕ್ಷಯ ರೋಗಿಗಳಲ್ಲಿ ಶಕ್ತಿಯನ್ನು ನೀಡುತ್ತದೆ ಹಾಗೂ ಪೂರಕ ಪೋಷಕಾಂಶಗಳನ್ನು ಒದಗಿಸಿ ಶೀಘ್ರ ಗುಣಮುಖರಾಗಲು ಸಹಕರಿಸುತ್ತದೆ ಎಂದು ತಿಳಿಸಿದರು.

- Advertisement - 

ಆಯುಷ್   ಇಲಾಖೆಯಿಂದ ವಿತರಿಸುವ ಚ್ಯವನ್ ಪ್ರಾಶ್ ಉತ್ತಮ ಪೌಷ್ಠಿಕಾಂಶಗಳಿಂದ ಕೂಡಿದ್ದು, ಯಾವುದೇ ವಯಸ್ಸಿನವರು ಸೇವಿಸಬಹುದಾಗಿದೆ. ಇದನ್ನು ಒಂದು ಲೋಟ ಹಾಲಿನೊಂದಿಗೆ ಬೆರೆಸಿ ತಿನ್ನಬಹುದು ಅಥವಾ ನೀರಿನೊಂದಿಗೆ ಆದರೂ ಬೆರೆಸಿ ತಿನ್ನಬಹುದು. ಇದನ್ನು ಕ್ಷಯರೋಗಿಗಳಿಗೆ ನೀಡುವುದರಿಂದ ಅವರು ಬೇಗ ಗುಣಮುಖರಾಗಬಹುದಾಗಿದೆ. ಎಲ್ಲರೂ ಕೈ ಜೋಡಿಸಿ ಟಿ.ಬಿ.ಯನ್ನು ಕೊನೆಗಾಣಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸ ಮೂರ್ತಿ, ಕ್ಷಯರೋಗ ನಿಯಂತ್ರಣ ಕಚೇರಿಯ ನಂದನ್, ಎಸ್ಟಿಎಸ್ ನಾಗರಾಜ್,  ಟಿಬಿಹೆಚ್ವಿ ಸಂತೋಷ್, ಲೋಕೇಶ್, ಫಾರ್ಮಸಿ ಅಧಿಕಾರಿ ಭೂತರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಕೋಟೇಶ್ ಚಕ್ರವರ್ತಿ, ಅರೋಗ್ಯ ಇಲಾಖೆಯ ಕೇಶವ, ರೇಖಾ, ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ವರ್ಗ ಇದ್ದರು.

 

 

Share This Article
error: Content is protected !!
";