ಜನವರಿ 14 ರಂದು ಅಯ್ಯಪ್ಪ ಸ್ವಾಮಿಯ ಲಕ್ಷ ದೀಪೋತ್ಸವ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 26 ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮವು ಜನವರಿ-14ರಂದು ಬುಧವಾರ ಸಂಜೆ 5 ಘಂಟೆಗೆ ನೆರವೇರಲಿದೆ.

ಸಂಸದ ಗೋವಿಂದ ಕಾರಜೋಳ ಅವರು ಲಕ್ಷ ದೀಪೋತ್ಸವ ಉದ್ಘಾಟಿಸಲಿದ್ದಾರೆ. ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದ ಸಮಿತಿ ಅಧ್ಯಕ್ಷ ಶರಣ್ ಕುಮಾರ್ ಅಧ್ಯಕ್ಷತೆ ವಹಿಸುವರು.

- Advertisement - 

 ಶಾಸಕ ಕೆ ಸಿ ವೀರೇಂದ್ರ (ಪಪ್ಪಿ ) ಹಾಗೂ ವಿಧಾನ ಪರಿಷತ್ ಶಾಸಕ ಕೆ ಎಸ್ ನವೀನ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾದ ಎಸ್ ಆರ್ ಎಸ್ ವಿದ್ಯಾಸಂಸ್ಥೆಯ ಬಿ.ಎ ಲಿಂಗಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ ಮಹಾಂತೇಶ, ಉದ್ಯಮಿಗಳಾದ ಉದಯ್ ಶೆಟ್ಟಿ, ಡಾ.ಸಿದ್ದಾರ್ಥ್ ಗುಂಡಾರ್ಪಿ
, ಐಶ್ವರ್ಯ ಗ್ರೂಪ್ ಅರುಣ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್ ಎಮ್ ದ್ಯಾಮಣ್ಣ,

ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಂಜನಮೂರ್ತಿ,ಇಂಜಿನಿಯರ್ ಸುಭಾಷ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ ಬದ್ರಿನಾಥ್, ಕಂಟೇಶ್ವರ ಏಜೆನ್ಸಿ ಸುರೇಶ್ ಬಾಬು, ದೇವಸ್ಥಾನದ ಸಂಪೂರ್ಣ ಹೂವಿನ ಅಲಂಕಾರ ಸೇವಕರ್ತರಾದ ರಾಜೇಶ್ವರಿ ಉದಯ ಶೆಟ್ಟಿ ಹಾಗೂ ಪದ್ಮಜಾ ಅಶೋಕ್ ಕುಮಾರ್( ಜಿಮ್ಮಿ) ಭಾಗವಹಿಸಲಿದ್ದಾರೆ.

- Advertisement - 

ಅಂದು ಸಂಜೆ 5-30 ಕ್ಕೆ ಸುರಸಾರವ ಭಕ್ತಿ ಭಾವಾಮೃತ ಸಂಗೀತ ಕಾರ್ಯಕ್ರಮ  ಖ್ಯಾತ ಹಿನ್ನೆಲೆ ಗಾಯಕರು ಯಶವಂತ್ ಮಂಗಳೂರು ನಿತಿನ್ ರಾಜ ರಾಮ ಶಾಸ್ತ್ರಿ ಮೈಸೂರು. ಹಾಗೂ ಕೃಪಾ ಎಸ್ ಬೆಂಗಳೂರು. ಇವರು ಭಜನಾ ಕಾರ್ಯಕ್ರಮ ನಡೆಸಿಕೊಡುವವರು.

ದೇವಸ್ಥಾನದ ಸಂಪೂರ್ಣ ಪ್ರಸಾದದ ಸೇವಕರ್ತರಾದ ರಾಜೇಶ್ವರಿ ಉದಯ್ ಶೆಟ್ಟಿ ಮತ್ತು ಭಕ್ತಿ ಕುಸುಮಾಂಜಲಿಯ ಸೇವಕರ್ತ ಪ್ರವೀಣ್ ಸುವರ್ಣ, ಸುಶಾಂತ್ ಮತ್ತು ಕುಟುಂಬದವರು.

ಜ.13ರಂದು ಮಂಗಳವಾರ ಸಂಜೆ 6 ಗಂಟೆಗೆ ಬೆಳ್ಳಿರಥದ ಸಾರೋಟಿಯಲ್ಲಿ ಬೆಳ್ಳಿ ಪಲ್ಲಕ್ಕಿ ಹಾಗೂ ನಾದಸ್ವರ ಛತ್ರಿ, ಚಮರ, ಪಟಾಕಿ ಸಿಡಿಸುವ ಹಾಗೂ ಇರುಮುಡಿ ಹೊತ್ತ ನೂರಾರು ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

 

Share This Article
error: Content is protected !!
";