ಬೇಬಿ ಆಯೇಷಾ ಕಣ್ಮರೆ, ಮಹೇಂದ್ರನ ಸಂಬಂಧಿಗೆ ಚಾಕು ಇರಿತ

News Desk

ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಯುವತಿ ಒಬ್ಬಳು ನಾಪತ್ತೆ ಯಾಗಿದ್ದು ಯುವಕನ ಸಂಬಂಧಿಗೆ ಯುವತಿ ಕಡೆಯವರು ಪೊಲೀಸರು ಠಾಣೆ ಬಳಿಯೇ ಚಾಕು ಇರಿದ ಭೀಕರ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

ಜಾಕೀರ್ ಹಾಗೂ ಆತನ ಸ್ನೇಹಿತನಿಂದ ಆರ್ಮುಗಮ್​​ಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ಈ ಕುರಿತು ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - 

ಬೇಬಿ ಆಯೇಷಾ ಕಳೆದ ಅಕ್ಟೋಬರ್- 1 ರಿಂದ ಕಣ್ಮರೆಯಾಗಿದ್ದು ಇದಕ್ಕೆ ಮಹೇಂದ್ರನೇ ಕಾರಣವೆಂದು ಯುವತಿಯ ಸಂಬಂಧಿಕರು ಶಂಕಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಪೌರಕಾರ್ಮಿಕರ ಕಾಲೋನಿ ನಿವಾಸಿ ಮಹೇಂದ್ರನ ಸಂಬಂಧಿ ಆರ್ಮುಗಮ್ ಮಹೇಂದ್ರ ಕಾಣೆಯಾಗಿದ್ದಾನೆಂದು ದೂರು ಕೊಡಲು ಠಾಣೆಗೆ ಬಂದಿದ್ದರು.

- Advertisement - 

ಜಾಕೀರ್ ಹಾಗೂ ಆತನ ಸ್ನೇಹಿತನಿಂದ ಈ ವೇಳೆ ಠಾಣೆ ಬಳಿಯೇ ಚಾಕುವಿನಿಂದ ಆರ್ಮುಗಮ್​​​ ಕುತ್ತಿಗೆಗೆ ಇರಿದಿದ್ದಾರೆ. ಸದ್ಯ ನಾಪತ್ತೆ ಹಾಗೂ ಚಾಕು ಇರಿತ ಸಂಬಂಧ ಪ್ರಕರಣ ದಾಖಲಾಗಿದೆ.

 

 

 

Share This Article
error: Content is protected !!
";