ತೂಬಗೆರೆ ಯಲ್ಲಿ ನರಿ ಮರಿ ಪ್ರತ್ಯಕ್ಷ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ನರಿ ಮರಿಯೊಂದು ಪತ್ತೆಯಾಗಿದೆ. ಗ್ರಾಮದ ನಿವಾಸಿ ಸಾಲಿ ಮುನಿರಾಜು ರವರು ಮುಂಜಾನೆ ವಾಕಿಂಗ್ ಹೋಗುವಾಗ
, ಶ್ವಾನಗಳ ಹಿಂಡು ಈ ಪುಟ್ಟ ನರಿ ಮರಿ ಮೇಲೆ ದಾಳಿ ಮಾಡಿರುವುದನ್ನು ನೋಡಿ ಕೊಡಲೇ ಎಚ್ಚೆತ್ತುಕೊಂಡು ಅದನ್ನು ರಕ್ಷಿಸಿ ಕೋಳಿ ಮಾಂಸ ನೀಡಿ ಆರೈಕೆ ಮಾಡಿ, ಅರಣ್ಯ ಇಲಾಖೆಯವರಿಗೆ ಸುದ್ದಿ ತಿಳಿಸಿದ್ದಾರೆ.

  ನಂತರ ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ನರಿ ಮರಿಯನ್ನು ವಶಕ್ಕೆ ಪಡೆದು ನಾಯಿಗಳಿಂದ ಹಲ್ಲೆಗೆ ಒಳಗಾದ ನರಿಯ ಮರಿಯನ್ನು ಕಾಡುಪ್ರಾಣಿಯನ್ನು ರಕ್ಷಿಸಿದ ಮುನಿರಾಜು, ಶ್ರೀಧರ, ನಾಗರಾಜು ರವರಿಗೆ ಕೃತಜ್ಞತೆ ತಿಳಿಸಿದರು.

  ನಾಯಿಗಳಿಂದ ಹಲ್ಲೆಗೆ ಒಳಗಾದ ನರಿಯ ಮರಿಯನ್ನು ಸೂಕ್ತ ಚಿಕಿತ್ಸೆ ನೀಡುವ  ಸಲುವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳುಹಿಸಿ ಕೊಡುವುದಾಗಿ  ತಿಳಿಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";