ಹಿಂದುಳಿದ ವರ್ಗದ ನೇತಾರ ಬಂಗಾರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀ ಎಸ್ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಇವರ ಜನ್ಮದಿನಾಚರಣೆ ಈ ದಿನದಂದು ಅವರ ಆಡಳಿತಾತ್ಮಕ ವಿಚಾರಗಳನ್ನು ನೆನೆದು ಗೌರವದ ನಮನಗಳನ್ನು ಅರ್ಪಿಸುತ್ತೇನೆ.

ಬಂಗಾರಪ್ಪನವರು ಹಿಂದುಳಿದ ವರ್ಗಗಳ ನೇತಾರ. ನಾಡಿನ ನೆಲ ಜಲದ ಬಗೆಗೆ ಅಪರಿಮಿತ ಕಾಳಜಿ ಹೊಂದಿದ್ದ ಸಮಾಜವಾದಿ ಚಿಂತಕರು. ನನ್ನ ನೆಚ್ಚಿನ ನಾಯಕರು, ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದರು.

ಇದೆ ಸಮಯಕ್ಕೆ ರಾಜ್ಯದಲ್ಲಿ ಮಳೆ ಅಭಾವದಿಂದ ಕನ್ನಂಬಾಡಿ ಅಣೆಕಟ್ಟೆಗೆ ನೀರು ಹೆಚ್ಚಾಗಿ ಬಂದಿರುವುದಿಲ್ಲ. ಈ ವಿಚಾರವನ್ನು ಗಮನಿಸಿದ ಸುಪ್ರೀಂಕೋರ್ಟ್ ತಮಿಳುನಾಡಿನ ಕೃಷಿ ಕಾಯಕಕ್ಕೆ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಿಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕೋರ್ಟ್ ಆದೇಶಿಸುತ್ತದೆ.

ಈ ವಿಚಾರವನ್ನು ಖಂಡಿಸಿದ ಮುಖ್ಯಮಂತ್ರಿ  ಬಂಗಾರಪ್ಪನವರು ರಾಜ್ಯದ ಹಿತಾಸಕ್ತಿಯ ಪರವಾಗಿ ನಿಂತರು. ಸುಪ್ರೀಂಕೋರ್ಟಿನ  ಅಧಿಸೂಚನೆಯನ್ನು ಧಿಕ್ಕರಿಸಿದರು.

ತಮಿಳುನಾಡಿಗೆ ನೀರು ಬಿಡದೆ ಕಾವೇರಿ ಕಣಿವೆಯ ರೈತರ ಬದುಕಿಗಾಗಿ ಪಣತೊಟ್ಟರು. ಬಂಗಾರಪ್ಪನವರ ಆಡಳಿತಾತ್ಮಕ ಸ್ಥೈರ್ಯವನ್ನು ನಾಡಿನ ಜನತೆ ಮೆಚ್ಚಿಕೊಂಡರು.

ಆ ದಿನಗಳಲ್ಲಿ ಈ ಸುದ್ದಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿತ್ತು ಹಾಗೂ ಇತಿಹಾಸ ಪುಟಗಳಲ್ಲಿಯು ದಾಖಲಾಯಿತು. ಬಂಗಾರಪ್ಪನವರ ಧೀಮಂತಿಕೆ ಗುಣಗಳು ನನ್ನಂತ ಅನೇಕ ಮೌಲ್ಯಾಧಾರಿತ ರಾಜಕಾರಣಿಗಳಿಗೆ ಸ್ಫೂರ್ತಿದಾಯಕ.
2004 ರಲ್ಲಿ ಬಂಗಾರಪ್ಪನವರು ಕಾಂಗ್ರೆಸ್ ಪಕ್ಷದಿಂದ ಸಿಡಿದೆದ್ದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಆ ಸಂದರ್ಭದಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಹಾಗೂ ವಿಧಾನ ಸಭೆಯಲ್ಲಿ ಚುನಾವಣೆಗೆ ಬಂಗಾರಪ್ಪನವರು ಶಿವಮೊಗ್ಗ ಲೋಕಸಭಾ ಸಂಸದರಾಗಿ ಆಯ್ಕೆಯಾದರು. ರಾಜ್ಯ ವಿಧಾನಸಭೆಗೆ ಬಿಜೆಪಿ ಪಕ್ಷದಿಂದ 77 ಶಾಸಕರು ಆಯ್ಕೆಯಾಗಲು ಬಂಗಾರಪ್ಪನವರ ನಾಯಕತ್ವ ಕಾರಣವಾಯಿತು. ಈ ಹಿನ್ನೆಲೆಯಲ್ಲಿಯೇ 2006ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಆಡಳಿತ ನೀಡಿದ್ದಾರೆ.

2007-08 ರ ಸಮಯದಲ್ಲಿ ಕೆಲವು ಕಾರಣಕ್ಕೆ ಬಿಜೆಪಿ ಪಕ್ಷದ ವಿರುದ್ಧ ಬೇಸತ್ತ ಬಂಗಾರಪ್ಪನವರು ಲೋಕಸಭಾ ಸಂಸದ್ದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಬಂಗಾರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಗೆ ಶಿವಮೊಗ್ಗ ನಗರದಲ್ಲಿ ದೊಡ್ಡ ಪ್ರಮಾಣದ ಬಹಿರಂಗ ಸಮಾವೇಶದ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಈ ಕಾರ್ಯಕ್ರಮದ ಯಶಸ್ಸು ಗೊಳಿಸುವ ಕಾರಣಕ್ಕೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮಂಜುನಾಥ್ ಅವರನ್ನು ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಎಂ.ಅಜ್ಜಪ್ಪ ಹಾಗೂ ನನ್ನನು ತೀರ್ಥಹಳ್ಳಿ ವಿಧಾನ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಕೆಪಿಸಿಸಿ ನೇಮಕ ಮಾಡಿದ್ದು ಈ ವಿಚಾರದಲ್ಲಿ ಎರಡು ಮೂರು ಬಾರಿ ತೀತ್ತರ್ಳಿಗೆ ನಾವುಗಳು ಬೇಟಿ ನೀಡಿ ಪಕ್ಷದ ಸಂಘಟನೆ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆ ನಮ್ಮದು ಒಂದು ಸಣ್ಣ ಪಾತ್ರವಿದ್ದಿದು ಈ ಸಮಯದಲ್ಲಿ ನೆನೆಯುತ್ತೇನೆ. ಇದು ಕಥೆಯಲ್ಲ ರಾಜ್ಯ ರಾಜಕಾರಣದ ಇತಿಹಾಸ.
ಲೇಖನ-ರಘು ಗೌಡ, 9916101265

 

 

 

- Advertisement -  - Advertisement -  - Advertisement - 
Share This Article
error: Content is protected !!
";