ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಕುಂಚಶ್ರೀ ಬಳಗದಿಂದ ಬಾಗಿನ ಅರ್ಪಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತುಮಕೂರು ನಗರದ ಕುಂಚಶ್ರೀ ಮಹಿಳಾ ಬಳಗದ ವತಿಯಿಂದ ಚಿತ್ರದುರ್ಗದ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರದ ಹಿನ್ನೀರಿನಲ್ಲಿ ಗಂಗೆ ಪೂಜೆಯನ್ನು ಮಾಡಿ ಜಲಾಶಯಕ್ಕೆ  ಬಾಗಿನವನ್ನು ಅರ್ಪಿಸಲಾಯಿತು.

ಹಿರಿಯೂರು ತಾಲೂಕು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶಿವಣ್ಣನವರು ಮತ್ತು ಪದಾಧಿಕಾರಿಗಳು ನಮ್ಮನ್ನು ತುಮಕೂರಿನ ಕುಂಚಶ್ರೀ ಮಹಿಳಾ ಬಳಗವನ್ನು ಸ್ವಾಗತಿಸಿ -ಸತ್ಕರಿಸಿ ಜಲಾಶಯದ ಇತಿಹಾಸವನ್ನು ವಿವರಿಸಿದರು.

ಕುಂಚಶ್ರೀ ಬಳಗದ ಅಧ್ಯಕ್ಷೆ ಲಲಿತಾ ಮಲ್ಲಪ್ಪ, ರತ್ನ ನಾಗರಾಜ್, ಮಂಜುಳಾ ನಾಗರಾಜ್, ಅನಿತಾ ರಾಮೇಗೌಡ, ಚಂದ್ರಕಲಾ, ಶಶಿಕಲಾ, ಚೇತನ್ ಮಂಜುನಾಥ್ ಮುಂತಾದ ಹಲವಾರು ಮಹಿಳೆಯರು ಗಂಗಾ ಪೂಜೆ ಮತ್ತು ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಪುರದ ಮಾರಿ ಕಣಿವೆಯ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ-ಕೆಂಪಮ್ಮ ದೇವಿಯ –ನೆನಪಿಗಾಗಿ ಈ ಜಲಾಶಯ ಕಟ್ಟಿ ನೂರಾ ಹದಿನೈದು ವರ್ಷವಾಗಿದೆ.

ಎರಡು ಬಾರಿ ಮಾತ್ರ ಜಲಾಶಯ ತುಂಬಿದ್ದು ಈಗ ಮೂರನೆಯ ಬಾರಿ ತುಂಬುವ ಹಂತದಲ್ಲಿದೆ ಭಾರತದ ಭೂಪಟದ ಆಕಾರದಲ್ಲಿ ಕಾಣುವ ಈ ಜಲಾಶಯ ನೋಡಲು ರಮ್ಯ ಮನೋಹರವಾಗಿದೆ ಎಂದು ಲಲಿತಾ ಮಲ್ಲಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

 

- Advertisement -  - Advertisement -  - Advertisement - 
Share This Article
error: Content is protected !!
";