ನಟ ದರ್ಶನ್‌ ಹಾಗೂ ಪವಿತ್ರಾ ಗೌಡರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಹಾಗೂ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆ
57ನೇ ಸೆಷನ್ ಕೋರ್ಟ್‌ನಲ್ಲಿ ನಡೆಯಿತು.

ದರ್ಶನ್‌ಪರ ವಕೀಲರು ವಾದ ಮಾಡಲು ಸಮಯ ಕೇಳಿದ ಹಿನ್ನೆಲೆಯಲ್ಲಿ ದರ್ಶನ್‌ರ ಜಾಮೀನು ಅರ್ಜಿ ಮುಂದೂಡಲಾಯಿತು. ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿ ಕೋರ್ಟ್‌ಆದೇಶ ಹೊರಡಿಸಿತು.

ಎಸ್‌ಪಿಪಿ ಕೋರ್ಟ್ ಹಾಲ್‌ನಲ್ಲಿ ನಡೆದ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರವಾಗಿ ಎಸ್‌ಪಿಪಿ ಪ್ರಸನ್ನಕುಮಾರ್‌ಅವರನ್ನು ಕರೆಸುವಂತೆ ನ್ಯಾಯಾಧೀಶರು ಸೂಚನೆ ನೀಡಿದರು. ರವಿಶಂಕರ್ ಅರ್ಜಿ ವಿಚಾರಣೆಗೂ ಎಸ್‌ಎಸ್‌ಪಿ ಅಗತ್ಯ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ ಅವರ ಹಾಜರಾತಿಗೆ ನ್ಯಾಯಾಲಯ ಸೂಚಿಸಿತು. ಇದಕ್ಕಾಗಿ ಕೆಲಕಾಲ ವಿಚಾರಣೆ ಮುಂದೂಡಲಾಯಿತು.

ಬಳಿಕ ಶುರುವಾದ ಪವಿತ್ರಗೌಡ ಗೌಡ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್‌ಪಿಪಿ ಪರ ವಕೀಲರು 15 ದಿನಗಳ ಸಮಯಾವಕಾಶ ಕೇಳಿದರು. ಸಮಯಾವಕಾಶ ನೀಡಲು ಆಗಲ್ಲ, ಇವತ್ತೇ ನಿಮ್ಮ ಸಿನಿಯರ್ ವಕೀಲರನ್ನು ಕರೆಸಿ ಎಂದು ನ್ಯಾಯಾಧೀಶರು ಸೂಚಿಸಿ, ಜಾಮೀನು ಅರ್ಜಿಯನ್ನು ಕೆಲ ಕಾಲ ಮುಂದೂಡಿದರು.

ಬಳಿಕ ಅಕ್ಟೋಬರ್‌4ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಯಿ. ಈಗಾಗಲೆ ದರ್ಶನ್, ಲಕ್ಷ್ಮಣ್ ಜಾಮೀನು ಅರ್ಜಿಯನ್ನು ಅ .4ಕ್ಕೆ ಮುಂದೂಡಿಕೆ ಮಾಡಲಾಗಿದ್ದು, ಸದ್ಯ ಪವಿತ್ರಾ ಗೌಡ ಅರ್ಜಿ ವಿಚಾರಣೆ ಕೂಡ ಮುಂದೂಡಿಕೆ ಮಾಡಿ ನ್ಯಾಯಾಧೀಶ ಶ್ರೀ ಜೈಶಂಕರ್ ಆದೇಶ ಹೊರಡಿಸಿದರು.

 

 

 

- Advertisement -  - Advertisement - 
Share This Article
error: Content is protected !!
";