ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಾಳು ಗ್ರಾಮದ ಶ್ರೀಕೆಂಚಾವಧೂತ ಗದ್ದುಗೆ ವಿಶ್ವಶ್ಥ ಸೇವಾ ಟ್ರಸ್ಟ್ ವತಿಯಿಂದ ಕೊಳಾಳು ಗ್ರಾಮದ ಕೆಂಚಾವಧೂತರ ಒಳಮಠದಲ್ಲಿ ಜೂನ್-16 ರಿಂದ 22ರವರೆಗೆ ಶ್ರೀಅಯ್ಯಪ್ಪ ಕವಿ ವಿರಚಿತ ಶ್ರೀಚಿದಾನಂದಾವಧೂತರ ಬಾಲಲೀಲಾಮೃತ ಪಾರಾಯಣವನ್ನು ಪುರಾಣ ಪ್ರವಚನಕಾರರಾದ ಶ್ರೀಕೆಂಚಾವಧೂತ ವಂಶಸ್ಥರಾದ ಜಿ.ಎಸ್.ಕೆಂಚಪ್ಪನವರು ನಡೆಸಿಕೊಡಲಿದ್ದಾರೆ.
ಜೂನ್-16 ರಂದು ರಾತ್ರಿ 9 ಗಂಟೆಗೆ ಮೊದಲ ಅಧ್ಯಾಯ ಗಂಗಾಪೂಜೆ ಬಾಲ್ಯ ವಿವರ, 17 ರಂದು ರಂದು ರಾತ್ರಿ 9 ಗಂಟೆಗೆ ದ್ವಿತೀಯ ಅಧ್ಯಾಯ ಕ್ಷೇತ್ರ ಸಂಚಾರ, 18 ರಂದು ರಾತ್ರಿ 9 ಗಂಟೆಗೆ ತೃತೀಯ ಅಧ್ಯಾಯ ಸದ್ಗುರ ಕಟಾಕ್ಷ, 19 ರಂದು ರಾತ್ರಿ 9 ಗಂಟೆಗೆ ಚತುರ್ಥ ಅಧ್ಯಾಯ ಹಠಯೋಗ,
20 ರಂದು ರಾತ್ರಿ 9 ಗಂಟೆಗೆ ಪಂಚಮ ಅಧ್ಯಾಯ ರಾಜಯೋಗ, 21 ರಂದು ರಾತ್ರಿ 9 ಗಂಟೆಗೆ ಷಷ್ಠಿ ಅಧ್ಯಾಯ ಕಾಶಿ ಯಾತ್ರೆ, 22 ರಂದು ರಾತ್ರಿ 9 ಗಂಟೆಗೆ ಸಪ್ತಮ ಅಧ್ಯಾಯ ಚಿನ್ಮಯ ಚಿದಾನಂದ ಪಾರಾಯಣ ಸೇರಿದಂತೆ ಪ್ರತಿ ದಿನ ರಾತ್ರಿ ಪುರಾಣ, ಭಜನೆ, ಕೀರ್ತನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಜಿ.ಎಸ್.ಕೆಂಚಪ್ಪ ಅವರು ಮನವಿ ಮಾಡಿದ್ದಾರೆ.
ಪ್ರತಿ ದಿನ ದಾಸೋಹ ಕಾರ್ಯಕ್ರಮ ಇದ್ದು ಕೊಳಾಳು ಗ್ರಾಮ ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಆಗಮಿಸಿ ಪ್ರಸಾದ ಸ್ವೀಕಾರ ಮಾಡುವಂತೆ ಅನ್ನ ದಾಸೋಹ ದಾನಿಗಳು ಮನವಿ ಮಾಡಿದ್ದಾರೆ.