ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀಶ್ರೀಶ್ರೀ ಡಾ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ 12 ನೇ ವರ್ಷದ ಗುರು ಸಂಸ್ಮರಣಾ ಮಹೋತ್ಸವ.
ಅಕ್ಷರ ಸಂತ, ಜ್ಞಾನ ಯೋಗಿ ಜಗದ್ಗುರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ನಮ್ಮನ್ನಗಲಿ 12 ವರ್ಷಗಳು ಕಳೆದಿದ್ದೇವೆ. ಗುರುಗಳ ಮಾರ್ಗದರ್ಶನದ ಆಶೀರ್ವಾದ ಭಕ್ತ ವೃಂದಕ್ಕೆ ಅಪಾರವಾದ ಜ್ಞಾನದ ಶಕ್ತಿತುಂಬಿದೆ.
ಗುರುಗಳು ಸೇವಾ ಸಂಕಲ್ಪದಲ್ಲಿ ಮಾಡಿರುವಂತಹ ಶೈಕ್ಷಣಿಕ ಮತ್ತು ಧಾರ್ಮಿಕ ಕೆಲಸಗಳು ಸರ್ವಜನಾಂಗದ ಹಿತದೃಷ್ಟಿಗೆ ಜ್ಞಾನದ ಬೆಳಕಾಗಿದೆ. ಗುರುಗಳ ಸಾಮಾಜಿಕ ಬದ್ಧತೆಯ ನಿಲುವುಗಳು ಸಮಾಜದ ಏಳಿಗೆಗೆ ಶಕ್ತಿತುಂಬಿದೆ. ಗುರುವರ್ಯರ ನೆನಪಿನ ತನ್ಮಯತೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ ಎಂದು ರಘು ಗೌಡ ತಿಳಿಸಿದ್ದಾರೆ.