ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳಿಗೆ ನಿರ್ಬಂಧ ಹೇರಿರುವ ಬಗ್ಗೆ ಸಾರಿಗೆ ಸಚಿವರಿಗೆ ಚಾಲಕರು ದೂರು ನೀಡಿ ಒತ್ತಾಯಿಸಿದರು. ಎಂದಿನಂತೆ ಪಿಕಪ್ ಪಾಯಿಂಟ್ ಗೆ ಅನುಮತಿ ಕೊಡಿಸುವಂತೆ ಚಾಲಕರು ಸಾರಿಗೆ ಸಚಿವರ ಮೊರೆ ಹೋಗಿ ದೂರು ನೀಡಿದ್ದರು. ದೂರು ಆಧರಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವಿಮಾನ ನಿಲ್ಥಾಣದ ಟರ್ಮಿನಲ್ 1ರ ಪಿಕಪ್ ಪಾಯಿಂಟ್ನಲ್ಲಿ ಕಳೆದ ಡಿಸೆಂಬರ್ 11ರಿಂದ ಹಳದಿ ಬೋರ್ಡ್ ಕ್ಯಾಬ್ಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು.
ವಿಮಾನ ನಿಲ್ದಾಣದ ಈ ಹೊಸ ರೂಲ್ಸ್ನಿಂದ ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ ಶುರುವಾಗಿದೆ. ಇನ್ನು ಚಾಲಕರ ಮನವಿ ಹಿನ್ನಲೆಯಲ್ಲಿ ಸಚಿವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪಾರ್ಕಿಂಗ್ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದ್ದಾರೆ.
ಟರ್ಮಿನಲ್ ನಿಂದ ಟ್ಯಾಕ್ಸಿ ಚಾಲಕರಿಗೆ ನೀಡಿರುವ ಪಿಕಪ್ ಪಾಯಿಂಟ್ ದೂರವಿದ್ದು ಪ್ರಯಾಣಿಕರು ಬರಲು ಕಷ್ಟವಾಗುತ್ತೆ ಮೊದಲು ಇದ್ದಲ್ಲೆ ಇವರಿಗೂ ಅವಕಾಶ ನೀಡಬಹುದಲ್ವಾ ಎಂದು ಕೇಳಿದ್ದಾರೆ. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡಲು ಹೊರಟಿದ್ದು ಇದು ಸರಿಯಲ್ಲ ಎಂದು ಅಸಮಧಾನ ಹೊರ ಹಾಕಿದರು.
ಟರ್ಮಿನಲ್ 1ರ ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ಕೂಡ 14 ಇದ್ದ ಬಸ್ಗಳನ್ನು 7ಕ್ಕೆ ಇಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ವಾ? ಎಂದು ಏರ್ಪೋಟ್ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

