ಅಭಿವೃದ್ಧಿ ಹೆಸರಲ್ಲಿ ಬೆಂಗಳೂರು 5 ಛಿದ್ರ ಮಾಡಿದ ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ಟನಲ್‌ನಿರ್ಮಾಣಕ್ಕೆ ಸಸ್ಯಕಾಶಿ ಲಾಲ್‌ಬಾಗ್‌ನ 6 ಎಕರೆ ಪ್ರದೇಶದ ಮೇಲೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಕ್ರದೃಷ್ಠಿ ಬಿದ್ದಿದೆ ಎಂದು ಜೆಡಿಎಸ್ ತಿಳಿಸಿದರು.

ಈಗಾಗಲೇ ಅಭಿವೃದ್ಧಿ ಹೆಸರಲ್ಲಿ ಬೆಂಗಳೂರನ್ನು 5 ಛಿದ್ರ ಮಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ, ಬೆಂಗಳೂರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಜ್ಜೆ ಗುರುತುಗಳನ್ನೇ ಅಳಿಸಿ ಹಾಕಲು ಹೊರಟಿದ್ದಾರೆ.

- Advertisement - 

ಸುರಂಗ ಕೊರೆಯುವುದರಿಂದ ಲಾಲ್‌ಬಾಗ್‌ನ ಐತಿಹಾಸಿಕ ಏಕಶಿಲಾ ಬಂಡೆಗೂ ಮತ್ತು ಕೆಂಪೇಗೌಡರ ಗೋಪುರಕ್ಕೂ ಹಾನಿಯಾಗಲಿದೆ. ಈ ಅವೈಜ್ಞಾನಿಕ ಯೋಜನೆ ಬಗ್ಗೆ ತಜ್ಞರು, ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.

 

- Advertisement - 

Share This Article
error: Content is protected !!
";