ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಏರೋಸ್ಪೇಸ್, ಡಿಫೆನ್ಸ್ ಮತ್ತು ಸೆಕ್ಯುರಿಟಿ ವಿಭಾಗದಲ್ಲಿ ಜಾಗತಿಕ ನಾಯಕರಾಗಿರುವ ಫ್ರಾನ್ಸ್ ಮೂಲದ ಥೇಲ್ಸ್ ಸಂಸ್ಥೆಯವರು ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಎಂಜಿನಿಯರಿಂಗ್ ಕಾಂಪಿಟೆನ್ಸ್ ಸೆಂಟರ್ ಅನ್ನು ಫ್ರಾನ್ಸ್ ದೇಶದ ಕಾನ್ಸೋಲ್ ಜನರಲ್ ಅವರಾದ MarcLamy, ಅವರೊಂದಿಗೆ ಉದ್ಘಾಟಿಸಿದ್ದು ಸಂತಸ ತರಿಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಮ್ಮ ಕೈಗಾರಿಕಾ ನಿಯೋಗದೊಂದಿಗೆ ಯುರೋಪ್ ಪ್ರವಾಸ ಕೈಗೊಂಡಿದ್ದಾಗ ಫ್ರಾನ್ಸ್ ಗೂ ಭೇಟಿ ನೀಡಿದ್ದೆವು. ಈ ವೇಳೆ ಥೇಲ್ಸ್ ನ ಉನ್ನತ ಮಟ್ಟದ ತಂಡದೊಂದಿಗೆ ಮಾತುಕತೆ ನಡೆಸಿ ರಾಜ್ಯದಲ್ಲಿರುವ ಹೂಡಿಕೆ ಅವಕಾಶಗಳ ಕುರಿತು ಮನದಟ್ಟು ಮಾಡಿಕೊಡಲಾಗಿತ್ತು.
ನಮ್ಮ ಮಾತುಕತೆಗಳು ಕೇವಲ ಚರ್ಚೆಗೆ ಸೀಮಿತವಾಗದೆ ಕೇವಲ 6 ತಿಂಗಳಲ್ಲೇ ಕಾರ್ಯರೂಪಕ್ಕೆ ಬರುತ್ತಿರುವುದಷ್ಟೇ ಅಲ್ಲದೆ ಫಲಪ್ರದವೂ ಆಗುತ್ತಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.