ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಶ್ವದಲ್ಲಿಯೇ ಅತಿ ಹೆಚ್ಚು ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿರುವ ಮಹಾನಗರಗಳ ಪೈಕಿ ಬೆಂಗಳೂರಿಗೆ 2ನೇ ಸ್ಥಾನದ ಕುಖ್ಯಾತಿ ಪಡೆದಿದೆ ಎಂದು ಜೆಡಿಎಸ್ ಬೇಸರ ವ್ಯಕ್ತಪಡಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ, ಲೂಟಿಕೋರ ಡಿ.ಕೆ ಶಿವಕುಮಾರ್ ಅವರು ಸಿಲಿಕಾನ್‌ಸಿಟಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂಬುದಕ್ಕೆ ಸಮೀಕ್ಷಾ ವರದಿಯೇ ಸಾಕ್ಷಿ ಎಂದು ಜೆಡಿಎಸ್ ಟೀಕಿಸಿದೆ.
ಎರಡು ಮುಕ್ಕಾಲು ವರ್ಷ ಕಳೆದರೂ ರಾಜಧಾನಿಯ ಗುಂಡಿ ಮುಚ್ಚಲು ಸಾಧ್ಯವಾಗದ ಡಿಕೆಶಿಗೆ ನಾಚಿಕೆಯಾಗಬೇಕು.
ಬ್ರ್ಯಾಂಡ್‌ಬೆಂಗಳೂರು ಮಾಡುತ್ತೇವೆ ಎಂದು ಭಾಷಣಗಳಲ್ಲಿ, ಜಾಹೀರಾತುಗಳಲ್ಲಿ ಬಿಟ್ಟಿ ಪ್ರಚಾರ ಪಡೆದು “ಬ್ಯಾಡ್‌ಬೆಂಗಳೂರು” ಮಾಡಿದ್ದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

