ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಗತ್ತಿಗೆ ಬ್ರ್ಯಾಂಡ್‌ಆಗಿದ್ದ ಸಿಲಿಕಾನ್‌ಸಿಟಿಯನ್ನು ಬ್ರ್ಯಾಂಡ್‌ಬೆಂಗಳೂರು ಎನ್ನುತ್ತಲೇ ಬ್ಯಾಡ್‌ಬೆಂಗಳೂರನ್ನಾಗಿ ಮಾಡಿದ್ದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಸಾಧನೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಕಾಂಗ್ರೆಸ್‌ಅಧಿಕಾರಕ್ಕೆ ಬಂದ ದಿನದಿಂದಲೇ ಆ ದಿನಗಳ ಕೊತ್ವಾಲ್‌ಶಿಷ್ಯಂದಿರು ಬೆಂಗಳೂರನ್ನು ಅಸುರಕ್ಷಿತ ನಗರವನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕೊತ್ವಾಲ್‌ಶಿಷ್ಯಂದಿರ ಜತೆ ಸೇರಿಕೊಂಡು ಟ್ರಾಫಿಕ್‌ಜಾಮ್‌ನಲ್ಲಿ ಬೆಂಗಳೂರನ್ನು ವಿಶ್ವದ 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಡಿಕೆ ಶಿವಕುಮಾರ್‌ಅವರು ಸಿದ್ದರಾಮಯ್ಯ ಅವರನ್ನು ಸೈಡ್‌ಗಿಟ್ಟು ಒಂದು ವೇಳೆ ಮುಖ್ಯಮಂತ್ರಿ ಆದರೆ, ಟ್ರಾಫಿಕ್‌ಜಾಮ್‌ನಲ್ಲಿ ನಂಬರ್1 ಸ್ಥಾನ ಪಡೆಯುವುದು ಖಚಿತ ನಿಶ್ಚಿತ! ಎಂದು ಬಿಜೆಪಿ ಭವಿಷ್ಯ ನುಡಿದಿದೆ.