ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಚಲನ ಚಿತ್ರಗಳ ಹಂಚಿಕೆದಾರರು, ದಾವಣಗೆರೆ ಗಿರಿ ಚಿತ್ರಮಂದಿರದ ಮಾಲೀಕ ಬನ್ನಿಕಟ್ಟಿ ವಿಜಯಕುಮಾರ್(68) ಅವರು ಮಂಗಳವಾರ ನಿಧನರಾಗಿದ್ದಾರೆ.
ಮೃತ ಬನ್ನಿಕಟ್ಟಿ ವಿಜಯಕುಮಾರ್ ಅವರು ದಾವಣಗೆರೆಯ ಮೆಸರ್ಸ್ ಗಿರಿ ಥಿಯೇಟರ್‌ನ ಚಲನಚಿತ್ರ ವಿತರಕರು ಮತ್ತು ಪ್ರದರ್ಶಕರಾಗಿ ಕೆಲಸ ಮಾಡಿದ್ದಾರೆ.
ಕೆಎಫ್‌ಸಿಸಿ ತನ್ನ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಮೃತರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಸಂತಾಪ ಸೂಚಿಸಿದೆ ಎಂದು ಚಿತ್ರದುರ್ಗ ಶಂಕರ್ ಚಿತ್ರಮಂದಿರದ ಮಾಲೀಕ ಕುಮಾರ್ ಅವರು ತಿಳಿಸಿದ್ದಾರೆ.