ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬರಗೂರು ರಾಮಚಂದ್ರಪ್ಪನವರು ಬರಹಗಾರರು ಇವರಿಗೆ ಜನ್ಮದಿನಾಚರಣೆಯ ಶುಭಾಶಯಗಳು.
ಬರಗೂರು ರಾಮಚಂದ್ರಪ್ಪನವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದಲ್ಲಿ ಜನಿಸಿದವರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಲ್ಲಿ ಎಂಎ ಪದವಿದರಾಗಿ ಬರಗೂರಿಗೆ ಹಿಂದಿರುಗಿದ ದಿನಗಳಲ್ಲಿ ಪಾವಗಡ ತಾಲ್ಲೂಕಿನ ಕೆ ಟಿ ಹಳ್ಳಿಯಲ್ಲಿ ಆಗ ತಾನೇ ಹೊಸದಾಗಿ ಪ್ರಾರಂಭವಾದ ಶ್ರೀ ರಾಮ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲವು ವರ್ಷಗಳ ಕಾಲ ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಪಾಠವನ್ನು ಮಾಡಿದ್ದಾರೆ.
ಆ ಕಾಲಮಾನದಲ್ಲಿ ರಾಮಚಂದ್ರಪ್ಪನವರ ಪಾಠವನ್ನು ಕೇಳಿರುವ ವಿಧ್ಯಾರ್ಥಿಗಳು ಇಂದಿಗೂ ರಾಮಚಂದ್ರಪ್ಪನವರ ಜ್ಞಾನದ ವಿಚಾರದಲ್ಲಿ ನೆನೆಯುತ್ತಾರೆ.
50 ವರ್ಷಗಳ ಹಿಂದೆ ಕೆ ಟಿ ಹಳ್ಳಿಯಲ್ಲಿ ಆಗತಾನೆ ನಮ್ಮ ಹೊಸ ಮನೆ ಕಟ್ಟಲಾಗಿತ್ತು ನಮ್ಮ ಮನೆ ಮೇಲಿನ ಒಂದು ಕೊಠಡಿಯಲ್ಲಿ ರಾಮಚಂದ್ರಪ್ಪನವರು ವಾಸವಿದ್ದರು ಈ ವಿಚಾರವನ್ನು ಕೆಲವು ಹಿರಿಯರು ರಾಮಚಂದ್ರಪ್ಪನವರ ವಿಚಾರದಲ್ಲಿ ನೆನೆಯುತ್ತಾರೆ.
ನಮ್ಮ ಕೆ ಟಿ ಹಳ್ಳಿಯಲ್ಲಿ ಕೇವಲ ಎರಡು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಮಚಂದ್ರಪ್ಪನವರು ಬೆಂಗಳೂರಿಗೆ ಉದ್ಯೋಗ ಅರಸಿ ಹೋದವರು ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ನಾಡಿನಲ್ಲಿ ಹೊಸ ಆಲೋಚನೆ, ಚಿಂತನೆಗಳಿಗೆ ಕಾರಣರಾದವರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ಕನ್ನಡ ಚಿತ್ರಗಳಿಗೆ ನಿರ್ದೇಶಕರಾಗಿ ಚಲನಚಿತ್ರಗಳಿಗೆ ಕಥೆಯನ್ನು ರಚಿಸಿದ್ದಾರೆ.
ಹಲವು ಸಿನಿಮಾಗಳಿಗೆ ಹಾಡುಗಳನ್ನು ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಬರಗೂರು ರಾಮಚಂದ್ರಪ್ಪನವರು ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಸೇವೆ ಗಣನೀಯವಾದ್ದದ್ದು.
ಬರಗೂರು ರಾಮಚಂದ್ರಪ್ಪನವರ ಚಿತ್ರಗಳು ಬಡವರ ಹಾಗೂ ದಲಿತರ ಪರವಾಗಿ ಧ್ವನಿಯೇತ್ತುವ ಗ್ರಾಮೀಣ ಹಿನ್ನೆಲೆಯ ಚಿತ್ರಗಳಾಗಿ ಜನರ ಜ್ಞಾನದ ವಿಕಾಸಕ್ಕೆ ಪೂರಕವಾಗಿವೆ. ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್ ಅವರ ವಿಶ್ವಾಸಕ್ಕೆ ರಾಮಚಂದ್ರಪ್ಪನವರು ಬಹಳಷ್ಟು ಆತ್ಮೀಯರಾಗಿದ್ದರು.
ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಹಾಡುಗಳು, ಕಥೆ, ಚಿತ್ರಕಥೆ ಇವೆಲ್ಲಾ ಬರಗೂರು ರಾಮಚಂದ್ರಪ್ಪನವರ ಜ್ಞಾನದ ಮುನ್ನೆಲೆಯಲ್ಲಿ ಮೂಡುತ್ತಿದ್ದವು.
ರಾಜ್ಯ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಸೇರಿದಂತೆ ಇನ್ನು ಅನೇಕ ಜ್ಞಾನದ ಭಂಡಾರದಲ್ಲಿ ರಾಮಚಂದ್ರಪ್ಪನವರು ದಕ್ಷತೆಯಿಂದ ಕೆಲಸ ಮಾಡಿದ್ದಾರೆ ಎಂದು ನಾನು ಅರಿತಿದ್ದೇನೆ. ಕಿರು ಲೇಖನ-ರಘು ಗೌಡ, ಕೆ.ಟಿ.ಹಳ್ಳಿ. 9916101265