ಆಗಸ್ಟ್-1ರಿಂದ ಬಸವ ಸಂಸ್ಕೃತಿ ಅಭಿಯಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ರಾಜ್ಯಾದ್ಯಂತ ಸೆಪ್ಟೆಂಬರ್ 1ರಿಂದ  ಅಕ್ಟೋಬರ್ 1ರವರೆಗೆ ಜರುಗಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭವು 5ನೇ ಅಕ್ಟೋಬರ್ 2025ರ ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ  ಮಹತ್ವಪೂರ್ಣ ಕಾರ್ಯಕ್ರಮಕ್ಕೆ ನಾಡಿನ ಮಠಾಧಿಪತಿಗಳೊಡನೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಆಹ್ವಾನಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

- Advertisement - 

ಬೆಳಗಾವಿ ನಾಗನೂರು ಮಠದ ಪರಮಪೂಜ್ಯ ಅಲ್ಲಮಪ್ರಭು ಮಹಾಸ್ವಾಮೀಜಿ, ಅಥಣಿ ಮೊಟಗಿ ಮಠದ ಶ್ರೀ ಚೆನ್ನಬಸವ ಮಹಾಸ್ವಾಮೀಜಿ, ಶೇಗುಣಶಿಯ ಶ್ರೀ ಮಹಾಂತ ಮಹಾಸ್ವಾಮೀಜಿ, ನೆಲಮಂಗಲ ಬಸವಣ್ಣ ದೇವರ ಮಠದ ಸ್ವಾಮೀಜಿ, ಬೆಂಗಳೂರು ನಿಜಗುಣ ಸ್ವಾಮೀಜಿ, ಮಾತೆ ಗಂಗಾಂಬಿಕಾ,

ನೆಲಮಂಗಲದ ಪವಾಡ ಮಠ ಸಿದ್ದಲಿಂಗ ಸ್ವಾಮೀಜಿ, ನಂಜುಂಡಿಯ ಗುರುದೇವರ ಮಠ ಸ್ವಾಮೀಜಿಚಕ್ರಭಾವಿಯ ಸಿದ್ದಲಿಂಗ ಸ್ವಾಮೀಜಿ, ಕೆಂಚುಗಲ್ ಬಂಡೆ ಮಠದ ಮಹಾಲಿಂಗ ಸ್ವಾಮೀಜಿ, ಚನ್ನಪಟ್ಟಣದ ಬೇವೂರು ಮಠದ ಮೃತ್ಯಂಜಯ ಸ್ವಾಮೀಜಿ ಉಪಸ್ಥಿತರಿದ್ದರು.

- Advertisement - 

 

 

Share This Article
error: Content is protected !!
";