ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ:
ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಕಟೌಟ್ ಗೆ ಹೂವಿನ ಹಾರ ಹಾಕಿ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಈ ಬಸವ ಜಯಂತಿಯಲ್ಲಿ ಗ್ರಾ.ಪಂ ಅಧ್ಯಕ್ಷ ತಿಪ್ಪಮ್ಮ ನಾಗರಾಜ್, ಮಾಜಿ ತಾಪಂ ಸದಸ್ಯರುಗಳಾದ ನೇತ್ರಮ್ಮ, ಜಿ ಓಬಣ್ಣ, ಹುಡೇಂ ಪಾಪಣ್ಣ, ಗ್ರಾ ಪಂ ಸದಸ್ಯರುಗಳಾದ ಗೌಡ್ರು ಸಣ್ಣ ಓಬಯ್ಯ, ಜಿ ಮಲ್ಲಪ್ಪ, ಮಾಜಿ ಗ್ರಾ. ಪಂ. ಸದಸ್ಯ ಗುಂಡಣ್ಣ, ಗ್ರಾಮದ ಮುಖಂಡರಾದ ಈ ಶರಣೇಶ, ಜಾಜುರ ಮಂಜಣ್ಣ, ಜಾಜುರ ಅಜಯ್, ನೀರು ಬಾವಿ ಮಹೇಶ್, ತಾತಯ್ಯರ್ ಮಂಜಣ್ಣ, ಪ್ರಶಾಂತ್ ನಾಯಕ, ವಸಂತಗೌಡ, ನಟರಾಜ, ಸಂಜು ಜಿನ್ಸಾಮಿ,
ರಾಜಣ್ಣ ಬೆನ್ ಶೆಟ್ಟಿ ರಾಜಣ್ಣ, ಜಿ ಟಿ ನಾಗರಾಜ್, ಶೇಖರಪ್ಪ, ಸೋಮಶೇಖರಪ್ಪ, ತಿಪ್ಪೇಸ್ವಾಮಿ, ಹೊನ್ನೂರ್ ಸಾಬ್, ಬಿಜೆಪಿ ಯುವ ಮುಖಂಡ ಜಿ ಎಂ ಶಿವಾನಂದ, ಗ್ರಾ.ಪಂ. ಹಾಲಿ ಹಾಗೂ ಮಾಜಿ ಸದಸ್ಯರುಗಳು ಮತ್ತು ಜೆಸ್ಕಾಂ ಸಿಬ್ಬಂದಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳು ಊರಿನ ಗ್ರಾಮಸ್ಥರು ಈ ಜಯಂತಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.