ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಸವೇಶ್ವರ ನಗರ ಎರಡನೇ ವಾರ್ಡ್ ಅಭಿವೃದ್ಧಿ ಹೊಂದಿದ ವಾರ್ಡ್ ಆಗುತ್ತಿದೆಯಾ ಎಂಬ ಪ್ರಶೆಗೆ ಪೂರ್ಣ ಪ್ರಮಾಣವಲ್ಲದಿದ್ದರೂ ಬಾಗಶಃ ಅಭಿವೃದ್ಧಿಯಾಗಿದೆ ಎಂತಲೇ ಹೇಳಬಹುದು. ವಾರ್ಡ್ ನ ನಗರಸಭಾ ಸದಸ್ಯ ಪದ್ಮನಾಭರವರ ಪರಿಶ್ರಮದಿಂದ ಇದ್ದುದರಲ್ಲಿ ಶೇಕಡಾವಾರು ಹೊಂದಿರುವುದರಲ್ಲಿ ಅನುಮಾನವಿಲ್ಲ.
ವಾರ್ಡಿನಲ್ಲಿ ಬಹು ಮುಖ್ಯವಾಗಿ ಮೂಲಭೂತ ಸೌಲಭ್ಯಗಳಾದ ಚರಂಡಿ, ನೀರು ಬೀದಿ ದೀಪ, ರಸ್ತೆ ಅತೀ ಪ್ರಮುಖವಾದವು. ಇವುಗಳನ್ನು ಪೂರೈಸುವಲ್ಲಿ ಪದ್ಮನಾಭ ರವರ ಕಾರ್ಯ ಕ್ಷಮತೆ ಕಣ್ಣಿಗೆ ಕಾಣುತ್ತದೆ. ಒಂದು ವಾರ್ಡ್ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳಷ್ಟೇ ಸಾಕಾಗುವುದಿಲ್ಲ. ಮೂಲಭೂತ ಸೌಕರ್ಯಗಳ ಜೊತೆಗೆ ವಾರ್ಡಿನ ಹತ್ತು ಹಲವು ಸಮಸ್ಯೆಗಳು ಪ್ರಾಮುಖ್ಯತೆ ಪಡೆದು ಕೊಳ್ಳುತ್ತವೆ.
ಹಾಗೆ ವಾರ್ಡಿನತ್ತ ಕಣ್ಣಾಯಿಸಿದರೆ ಸಮಸ್ಯೆಗಳ ಪರಿಹಾರಕ್ಕೆ ಕನಿಷ್ಠ ಚಿಂತನೆ ನಡೆದಿರುವುದು ಸ್ಪಷ್ಟ. ವಾರ್ಡಿನ ಹಿರಿಯ ನಾಗರಿಕರ, ವಿಕಲಚೇತನರ ಪಿಂಚಣಿ, ಮಸಾಶನ ಪಡಿತರ ಚೀಟಿ ವಂಚಿತ ಕುಟುಂಬಗಳನ್ನು ಗುರ್ತಿಸಿ ಪಡಿತರ ಚೀಟಿ ಕೊಡಿಸುವುದು. ವಾರ್ಡಿನಲ್ಲಿ ಸರ್ಕಾರಿ ನ್ಯಾಯ ಬೆಲೆ ಅಂಗಡಿ ತೆರೆದು ಸಮರ್ಪಕ ರೀತಿಯಲ್ಲಿ ಪಡಿತರ ವಿತರಣೆ ಆಗುವಂತೆ ನೋಡಿಕೊಳ್ಳುವುದು. ವಾರ್ಡಿನ ಸಾರ್ವಜನಿಕರ ಸ್ವತ್ತುಗಳಿಗೆ ಈ ಖಾತೆ ಕೊಡಿಸುವುದು ಸೇರಿದಂತೆ ಹಲವು ಕೆಲಸಗಳು ಸ್ಥಳೀಯ ಜನಪ್ರತಿನಿದಿಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ವಾರ್ಡಿನ ಸದಸ್ಯರು ತೊಡಗಿಸಿಕೊಂಡಂತೆ ಕಾಣುತ್ತದೆ.
ಬಸವೇಶ್ವರ ನಗರ ವಾರ್ಡಿನ ನಗರಸಭಾ ಸದಸ್ಯ ಪದ್ಮನಾಭ ರವರ ಬಗ್ಗೆ ಹೇಳಬೇಕೆಂದರೆ ವಾರ್ಡಿನ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಸಮಾಧಾನಕರವಾಗಿ ನಡೆದಿರುವುದು ಸತ್ಯ. ದಿನ ಬೆಳಗಾಯಿತೆಂದರೆ ವಾರ್ಡಿನಲ್ಲಿ ನಿರಂತರ ವಾಗಿ ಸುತ್ತಾಡಿ ಜನತೆಯ ಸಮಸ್ಯೆಗಳನ್ನು ಅರಿಯುವಲ್ಲಿ ಪದ್ಮನಾಭ ಪ್ರಯತ್ನ ಮೆಚ್ಚುವಂತದ್ದು. ಪ್ರಮುಖವಾಗಿ ವಾರ್ಡಿನ ಜನಕ್ಕೆ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು.
ಕುಡಿಯುವ ನೀರಿಗಾಗಿ ನೀರಿನ ಘಟಕಗಳನ್ನು ತೆರೆದಿರುವುದು ವಾರ್ಡಿನ ಜನರ ಆರೋಗ್ಯದ ದೃಷ್ಟಿಯಿಂದ ಅರೋಗ್ಯ ಶಿಬಿರಗಳನ್ನು ಆಯೋಜಿಸಿರುವುದು. ಸ್ವಚ್ಛ ತಾ ದೃಷ್ಟಿಯಿಂದ ಹಸಿಕಸ ಒಣಕಸ ಪ್ರತ್ಯೇಕ ವಿಲೇವಾರಿ ಮಾಡಿಸುವುದು, ಪಡಿತರ ವಿತರಣೆ ಸಂದರ್ಭದಲ್ಲಿ ಸ್ಥಳದಲ್ಲೇ ಮೊಕ್ಕಾಮ್ ಹೂಡಿ ಸಮರ್ಪಕ ಪಡಿತರ ವಿತರಣೆ ಆಗುವಂತೆ ನೋಡಿಕೊಂಡಿರುವುದು.
ಪ್ಲಾಸ್ಟಿಕ್ ಬಳಕೆ ಬಗ್ಗೆ ವಾರ್ಡಿನಲ್ಲಿ ಅರಿವು ಮೂಡಿಸಿರುವುದು. ಬಹುಮುಖ್ಯವಾಗಿ ವಾರ್ಡಿನಲ್ಲಿ ಉತ್ತಮ ಗಾಳಿ ವಾತಾವರಣದ ದೂರ ದೃಷ್ಟಿಯಿಂದ ರಸ್ತೆಯ ಇಕ್ಕೆಲಗಳಲ್ಲಿ ಹೊಂಗೆಯ ಸಸಿ ನೆಡೆಸಿ ಪೋಶಿಸಿ ಮರಗಳನ್ನು ಬೆಳೆಸಿ ಪರಿಸರ ವಾರ್ಡ್ ಆಗುವಂತೆ ಶ್ರಮ ವಹಿಸಿರುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ವಾರ್ಡಿನ ಅಭಿವೃದ್ಧಿಗೆ ಶ್ರಮಿಸಿರುವುದು ಪದ್ಮನಾಭ ರವರ ಕಾರ್ಯ ಕ್ಷಮತೆ ಶ್ಲಾಘನೀಯವಾದುದು.
ಇದಲ್ಲದೆ ಹಲವು ಸಂದರ್ಭಗಳಲ್ಲಿ ಸ್ವಂತ ಖರ್ಚಿನಿಂದ ವಾರ್ಡನ ಕೆಲಸ ಮಾಡಿಸಿರುವುದು. ವಾರ್ಡಿನ ಅಶಕ್ತರಿಗೆ ಆರ್ಥಿಕ ಸಹಕಾರ ನೀಡಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸಿರುವುದು, ವಾರ್ಡಿನ ನಾಗರಿಕರ ಸತತ ಸಂಪರ್ಕ ದೃಷ್ಟಿಯಿಂದ ವಾರ್ಡಿಗೆ ಸಂಬಂಧ ಪಟ್ಟಂತೆ ವಾಟ್ಸಾಪ್ ಗ್ರೂಪ್ ತೆರೆದು ಸಮಸ್ಯೆಗಳನ್ನು ಅರಿತು ಅದರ ಪರಿಹಾರ ದೊರಕಿಸಲು ಪ್ರಯತ್ನಿಸಿರುವುದು ಇವೆಲ್ಲವೂ ಪದ್ಮನಾಭ ರವರ ಕಾಳಜಿಯನ್ನು ಬಿಂಬಿಸುತ್ತದೆ.
ಇಷ್ಟೆಲ್ಲಾ ಅಭಿವೃದ್ಧಿಯತ್ತ ವಾರ್ಡ್ ಸಾಗಿದ್ದರೂ ಕೆಲವೊಂದು ಸಮಸ್ಯೆಗಳು ಸಹ ಕಣ್ಣಿಗೆ ಕಾಣದೆ ಇರದು. ಸ್ವಚ್ಛತೆ ಬಗ್ಗೆ ಸದಸ್ಯರು ನಾಗರಿಕರಲ್ಲಿ ಅರಿವು ಮೂಡಿಸಬೇಕಿತ್ತು. ಏಕೆಂದರೆ ವಾರ್ಡಿನ ಹಲವು ರಸ್ತೆಗಳಲ್ಲಿ ಕಸದ ತ್ಯಾಜ್ಯ ಬಿದ್ದಿರುತ್ತದೆ. ಕೆಲವರು ನಗರಸಭೆಯ ಕಸ ವಿಲೇವಾರಿ ವಾಹನ ಮನೆ ಬಳಿ ಬಂದರೂ ಕಸವನ್ನು ಅದಕ್ಕೆ ಹಾಕದೆ ರಸ್ತೆಗೆಸೆಯುವುದು ಕಣ್ಮುಂದಿದೆ. ಈ ಬಗ್ಗೆ ಎಚ್ಚರಿಕೆಯ ನೋಟಿಸ್ ಫಲಕವನ್ನು ಅಲ್ಲಲ್ಲಿ ಹಾಕಿದ್ದರೂ ಸಹ ಅದೇ ಪ್ರವೃತ್ತಿ ಮುಂದುವರೆದಿದೆ. ಬಹುಷಃ ಇದನ್ನು ಪ್ರಜ್ಞೆಯ ಅಭಾವ ಎನ್ನಬಹುದು.
ವಾರ್ಡಿನ ಆರೋಗ್ಯದ ಹಾಗೂ ಸ್ವಚ್ಛತೆ ದೃಷ್ಟಿಯಿಂದ ಈ ಬಗ್ಗೆ ಸದಸ್ಯರು ಗಮನ ಹರಿಸಬೇಕಿದೆ. ನಗರದ ಗಡಿ ಭಗವಾದ ಬಸವೇಶ್ವರ ನಗರ ವಾರ್ಡಿನಲ್ಲಿ ಕೆಲವು ಕಡೆ ಸಿಮೆಂಟ್ ರಸ್ತೆಗಳಿಲ್ಲ. ಬಹುಷಃ ಮಳೆ ಬಂದರೆ ಸಾರ್ವಜನಿಕವಾಗಿ ತೊಂದರೆಯಾಗುತ್ತದೆ ಎಂಬುದನ್ನು ಸದಸ್ಯರು ಮನ ಗಾಣ ಬೇಕು. ಇದಕ್ಕೆ ಅನುದಾನದ ಕೊರತೆ ಎಂತಲೇ ಹೇಳಬಹುದು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿರುವ ಪದ್ಮನಾಭ ವಾರ್ಡನ ಪೂರಕ ಅನುದಾನಕ್ಕಾಗಿ ಶಾಸಕರ ಮನವೊಲಿಸಿ ಹೆಚ್ಚಿನ ಅನುದಾನ ತಂದು ಉಳಿದಿರುವ ಅವಧಿಯಲ್ಲಿ ವಾರ್ಡನ್ನು ಅಭಿವೃದ್ಧಿ ಗೊಳಿಸುತ್ತಾರೆನ್ನುವುದು ವಾರ್ಡಿನ ಜನತೆಯ ಆಶಯವಾಗಿದೆ.