ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ಉರುಮೆ ನಂದಿಕೋಲು,ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಶರಣ ಬಸವೇಶ್ವರ ಸ್ವಾಮಿ ತೇರಿಗೆ ಭಾರಿ ವಂಶಸ್ಥರ ಕುಟುಂಬದ ವತಿಯಿಂದ ಜರುಗುವ ಮೀಸಲು ಪೂಜಾ ಸಕಲ ವಿಧಿ ವಿಧಾನಗಳ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮದ ಮುಖಂಡರು ತೇರಿಗೆ ಚಾಲನೆ ನೀಡಿದರು.
ನಂತರ ಬಣ್ಣ ಬಣ್ಣದ ಬಾವುಟ ಮತ್ತು ಹೂವಿನ ಹಾರಗಳಿಂದ ಶೃಂಗಾರಗೊಂಡ ತೇರು ಅದ್ದೂರಿಯಾಗಿ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿ ಪಾದಗಟ್ಟೆ ಸಮೀಪದ ಶ್ರೀ ಮಹಶ್ರೀ ವಾಲ್ಮೀಕಿ ಪುತ್ಥಳಿ ವೃತ್ತದ ಬಳಿ ಸೇರಿತು. ನಂತರ ರಥದ ಮುಕ್ತಿ ಬಾವುಟವನ್ನು ಗ್ರಾಮದ ಪಾಲಯ್ಯನವರ ಪುತ್ರ ಅನಿಲ್ ಕುಮಾರ್ ರವರು 9,500 ರೂ.ಗೆ ಪಡೆದು ಶ್ರೀ ಶರಣ ಬಸವೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾದರು.
ಸಂಜೆಯ ವೇಳೆ ತೇರಿನ ಭವ್ಯವಾದ ಮೆರವಣಿಗೆಯು ವಿವಿಧ ರೀತಿಯ ನೃತ್ಯಗಳು ಡೊಳ್ಳು ಕುಣಿತ, ಕೀಲು ಕುದುರೆ, ಹೂವು, ಹಣ್ಣು ಕಾಯಿ ದವನ, ನೂರಾರು ಭಕ್ತರು ತೇರಿಗೆ ಸಮರ್ಪಿಸಿವರು. ಮಂಗಳ ವಾದ್ಯಗಳೊಂದಿಗೆ ರಥೋತ್ಸವವು ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಬಳಿ ಸೇರಿತು.
ಇದೇ ವೇಳೆಯಲ್ಲಿ ದಲಿತ ಸಮುದಾಯದ ಶ್ರೀ ದುರ್ಗಾಂಬಿಕ ದೇವಿಯ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯರು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು, ದೀಪ ಹಚ್ಚಿ ಬೆಳಗುವ ಮೂಲಕ ತಮ್ಮ ಕೋರಿಕೆ ಇಷ್ಟಾರ್ಥಗಳನ್ನು ಶ್ರೀ ದೇವಿಯ ಪಾದ ಕಮಲಗಳಿಗೆ ಸಮರ್ಪಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾದರು.
ಗ್ರಾಮದ ಮುಖಂಡ ದೊಡ್ಡ ಓಬಯ್ಯ ಮಾತನಾಡಿ ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಪಾಲ್ಗೊಂಡು ಶ್ರೀ ಶರಣ ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಯಶಸ್ವಿಗೊಳಿಸಿದ್ದಾರೆ. ಸ್ವಾಮಿಯು ಗ್ರಾಮದ ಎಲ್ಲ ಸದ್ಭಕ್ತರಿಗೆ ನೆರೆಹೊರೆಯ ಜನರಿಗೆ ಒಳ್ಳೆಯ ಆಯುಷ್ ಆರೋಗ್ಯ ನೀಡಿ ಕಾಪಾಡಲಿ ಹಾಗೆ ಒಳ್ಳೆಯ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಾದ ಎಸ್. ಟಿ ರೇವಣ್ಣ, ರಾಜಣ್ಣ, ಲಕ್ಷ್ಮೀದೇವಿ ತಿಪ್ಪೇಸ್ವಾಮಿ, ಡಿ.ಓ ಲಕ್ಷ್ಮೀ, ದ್ರಾಕ್ಷಯಣಿ ನಾಗರಾಜ್, ಗ್ರಾಮದ ಮುಖಂಡರಾದ ಜಿ.ತಿಪ್ಪೇಸ್ವಾಮಿ, ಬಾಲಯ್ಯ, ಓಬಣ್ಣ, ಬಸಯ್ಯ, ಪಾಲಯ್ಯ, ಗೋಪಣ್ಣ, ತಿಪ್ಪಯ್ಯ ರೈತರಾದ ನಾಗರಾಜ್, ತಿಪ್ಪೇಸ್ವಾಮಿ, ಸೋಮಶೇಖರ್, ಲಿಂಗಾರೆಡ್ಡಿ, ಭೀಮರೆಡ್ಡಿ, ರುದ್ರಣ್ಣ, ಓಬಯ್ಯ, ಟಿ. ರಾಜಣ್ಣ, ಸಣ್ಣ ನಾಗಯ್ಯ, ಮಾಜಿ ಗ್ರಾಪಂ ಅಧ್ಯಕ್ಷ ಎಂ.ಹೆಚ್ ತಿಪ್ಪೇಸ್ವಾಮಿ,
ಪುಟ್ಟಣ್ಣ, ತಿಪ್ಪೇಸ್ವಾಮಿ, ಓಬಣ್ಣ, ಮಂಜಣ್ಣ, ಮಲ್ಲಯ್ಯ, ಹನುಮಂತಪ್ಪ, ಮಲ್ಲಿಕಾರ್ಜುನಯ್ಯ.ಟಿ, ಲಿಂಗರಾಜ್.ಡಿ, ರುದ್ರಮುನಿ, ಮಂಜುನಾಥ್ ಎಂ.ಟಿ, ವಿನಯ್ ಕುಮಾರ್ ಬಿ.ಎಂ, ಶಿವಕುಮಾರ್ ಭಾರಿ, ಶ್ರೀನಿವಾಸ್, ಮಾರಣ್ಣ, ಭೀಮಣ್ಣ, ಹನುಮಂತಪ್ಪ, ದುರುಗಣ್ಣ, ಸಣ್ಣ ತಿಪ್ಪೇಸ್ವಾಮಿ, ಶ್ರೀಧರ್ ತಿಪ್ಪೇಸ್ವಾಮಿ, ವಿಜಯ್ ಕುಮಾರ್, ಪರಶುರಾಮ್, ಕೋಡಿಹಳ್ಳಿ ಟಿ.ಶಿವಮೂರ್ತಿ ಸೇರಿದಂತೆ ಗ್ರಾಮಸ್ಥರು ಇದ್ದರು.

