ಕ್ಯಾನ್ಸರ್ ರೋಗದ ಬಗ್ಗೆ ಎಚ್ಚರ ವಹಿಸಿ-ಸಣ್ಣ ರಂಗಮ್ಮ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜೋಗಿ ಮಟ್ಟಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ದಿನಾಚರಣೆ ಮಾಡಲಾಯಿತು.
ಜಿಲ್ಲಾ ಪೌಷ್ಟಿಕ ಅಧಿಕಾರಿ ಸಣ್ಣ ರಂಗಮ್ಮ ಅವರು ಸಭೆಗೆ ಸೇರಿದ್ದ ಗರ್ಭಿಣಿ ಬಾಣಂತಿಯರು ಇತರರಿಗೆ ಪೌಷ್ಟಿಕ ಆಹಾರಗಳ ಮಾಹಿತಿ, ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಕುಟುಂಬ ಯೋಜನೆಗಳು ಮತ್ತು ಕ್ಯಾನ್ಸರ್ ಪೀಡಿತ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು.

3 ವಾರಗಳಿಗಿಂತ ಹೆಚ್ಚು ಕಾಲ ಬಾಯಿ ಅಥವಾ ನಾಲಿಗೆ ಹುಣ್ಣು ಕಾಣಿಸಿಕೊಂಡಿದ್ದರೆ, ಕೆಮ್ಮು ಅಥವಾ ಕೊಕ್ಕಿನ ಧ್ವನಿ 3 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ಅಜೀರ್ಣ ಮುಂದುವರಿದರೆ, ರಕ್ತ ಕೆಮ್ಮುವುದು, ಸ್ತನಗಳ ಗಾತ್ರ, ಆಕಾರ ಅಥವಾ ಅನುಭವದ ಬದಲಾವಣೆಗಳು ಕಂಡು ಬಂದಾಗ ಕೂಡಲೇ ವೈದ್ಯರ ಭೇಟಿ ಮಾಡಬೇಕು ಎಂದು ಸಣ್ಣರಂಗಮ್ಮ ಜಾಗೃತಿ ಮೂಡಿಸಿದರು.

- Advertisement - 

ಸ್ತನಗಳ ಮೇಲೆ ಚರ್ಮದ ಯಾವುದೇ ಭಾಗ ಮಬ್ಬಾಗುವುದು ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ, ಋತು ಬಂಧದ ನಂತರ, ಲೈಂಗಿಕತೆಯ ನಂತರ ಯೋನಿಯಲ್ಲಿ ರಕ್ತಸ್ರಾವ ಆಗುತ್ತಿದ್ದರೆ, ಮೂತ್ರದಲ್ಲಿ ರಕ್ತ ಬರುವುದು, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಕಾಣಿಸುವುದು, ಗಾತ್ರ, ಆಕಾರ ಅಥವಾ ಮಲದ ಬಣ್ಣದಲ್ಲಿ ಬದಲಾವಣೆ ಆಗಿದ್ದರೆ ತುಂಬಾ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.

4 ವಾರಗಳಿಗಿಂತ ಹೆಚ್ಚು ಕಾಲ ನೋವು ಕಾಣಿಸಿಕೊಂಡಿದ್ದರೆ, ಅಸಾಮಾನ್ಯ ರೀತಿಯಲ್ಲಿ ದೇಹದಲ್ಲಿ ಊತ, ತೂಕ ನಷ್ಟ, ರಾತ್ರಿ ಬೆವರುವಿಕೆ ಲಕ್ಷಣಗಳು ಕಂಡು ಬಂದಲ್ಲಿ ಕ್ಯಾನ್ಸರ್ ಗೆ ದಾರಿ ಮಾಡುವ ಸಾಧ್ಯತೆ ಹೆಚ್ಚಿದ್ದು ನಿರ್ಲಕ್ಷ್ಯ ಮಾಡದಂತೆ  ಸಣ್ಣ ರಂಗಮ್ಮ ಎಚ್ಚರಿಸಿದರು.

- Advertisement - 

ಆರೋಗ್ಯ ಕಾರ್ಯಕರ್ತೆ ಏಕಾಂತಮ್ಮ ಇವರು ಜನರಿಗೆ ಎನ್ವಿ ಬಿಡಿಸಿಪಿ ಬಗ್ಗೆ ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತೆಯರು ಡೆಂಗ್ಯೂ, ಮಲೇರಿಯಾ ಬಗ್ಗೆ ಜನರಿಗೆ ಮನೆಯ ಸುತ್ತಮುತ್ತಲಿನ ಚರಂಡಿಗಳನ್ನ ಸ್ವಚ್ಛತೆಯಿಂದ ನೋಡಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಎಚ್ ಸಿಓ ಏಕಾಂತಮ್ಮ, ಆಶಾ ಕಾರ್ಯಕರ್ತೆಯರಾದ ಸಂಗೀತಾ, ಸುಜಾತ, ಅನ್ನಪೂರ್ಣ, ಅಂಗನವಾಡಿ ಕಾರ್ಯಕರ್ತೆ ಮಮತಾ, ಸಹಾಯಕಿ ಭಾಗ್ಯ ಮತ್ತಿತರರು ಭಾಗವಹಿಸಿದ್ದರು.

 

Share This Article
error: Content is protected !!
";