ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುವರ್ಣ ಸೌಧದಲ್ಲಿ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಗೂಂಡಾ ವರ್ತನೆ ಅಮಾನವೀಯವಾದುದು. ಮಾಜಿ ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರಾದ ಸಿ. ಟಿ. ರವಿ ಅವರನ್ನು ಬಂಧಿಸಿ
ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಬಳಿಕ, ಅಕ್ರಮವಾಗಿ ರಾತ್ರಿಯಿಡೀ ಬೇರೆ ಬೇರೆ ಸ್ಥಳ, ಜಿಲ್ಲೆಗಳಲ್ಲಿ ಪೊಲೀಸ್‌ವಾಹನದಲ್ಲಿ ಸುತ್ತಾಡಿಸಿರುವ ಪೊಲೀಸರ ನಡೆ ಅಮಾನುಷವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಒಬ್ಬ ಜನಪ್ರತಿನಿಧಿಯ ವಿರುದ್ಧ ಸರ್ಕಾರ ಈ ರೀತಿ ನಡೆದುಕೊಂಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಮತ್ತು ರಾಜ್ಯದಾದ್ಯಂತ ಹೋರಾಟ ನಡೆಸುತ್ತದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.