ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ಬಸವ ಭವನದ ಬಳಿ ಇರುವ “ಲಾವಣ್ಯ ಶಿಕ್ಷಣ ಮಹಾವಿದ್ಯಾಲಯವು” 2025 ನೇ ಬಿಇಡಿ ಅಂತಿಮ ಪರಿಕ್ಷಯಲ್ಲಿ ಶೇ 100 ರಷ್ಟು ಫಲಿತಾಂಶ ಗಳಿಸಿ ಉತ್ತಮ ಸಾಧನೆ ಮಾಡಿದೆ.
ಒಟ್ಟು 49 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 17 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ರಾಘವೇಂದ್ರ ವಿ ಶೇ 94.50, ಶೀಲ್ಪಾ ವೈ ಎನ್ ಶೇ 94.33, ಸಾವಿತ್ರೀ ಬಿ ಶೇ 94.17, ಕಾವ್ಯ ಹೆಚ್ ಶೇ 94 ಅಂಕಗಳನ್ನು ಗಳಿಸಿ ಕೀರ್ತಿ ತಂದಿದ್ದಾರೆ.
ಸೃಷ್ಟಿ ಶೇ. 93, ಅನುಷಾ ಶೇ 93, ವತ್ಸಲಾ ಶೇ. 93, ವೆಂಕಟೇಶ್ ಶೇ 93, ಕಾವ್ಯ ಶೇ. 93, ಮಾಲತಿ ಶೇ 93, ರಶ್ಮೀ ಎನ್ ಶೇ 92, ಕೌಶಲ್ಯ ಶೇ. 92,

ಮದುಚಂದ್ರ ಕೆ ಎಂ 92 ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿರುವ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ವಿಶ್ವಾಸ್ ಹನುಮಂತೇಗೌಡ, ಬಿಇಡಿ ಪ್ರಾಂಶುಪಾಲ ಪ್ರೊ ಜಿ ಕೃಷ್ಣಮೂರ್ತಿ, ಪದವಿ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
2025-26 ನೇ ಸಾಲಿನ ಪ್ರಥಮ ವರ್ಷದ ಬಿಇಡಿ ದಾಖಲಾತಿಗಳು ಪ್ರಾರಂಭವಾಗಿವೆ ಎಂದು ಆಡಳಿತ ಮಂಡಳಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

