ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ,ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ 2025-26ನೇ ಸಾಲಿನಲ್ಲಿ 18-35 ವರ್ಷ ವಯೋಮಾನದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು
ನೆಲಮಂಗಲ ತಾಲ್ಲೂಕುಗಳಲ್ಲಿ ವಾಸಿಸುತ್ತಿರುವ ಯುವಕ ಯುವತಿಯರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ (20 ಜನ ಮಾತ್ರ) ಕುರಿತು ಆರು ದಿನಗಳ ಕಾಲ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ತರಬೇತಿಯ ವೇಳೆ ಉಚಿತ ಊಟ, ವಸತಿ ಮತ್ತು ತರಬೇತಿ ಸಾಮಗ್ರಿಗಳ ಸೌಲಭ್ಯವಿರುತ್ತದೆ.
ಆಸಕ್ತ ಯುವಕ/ಯುವತಿಯರು ಖುದ್ದಾಗಿ ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ, ದೊಡ್ಡಬಳ್ಳಾಪುರ ತಾಲೂಕು ಇವರ ಕಚೇರಿಗೆ ಬಂದು ಅಥವಾ ಮೊಬೈಲ್ ಸಂಖ್ಯೆ 7338595248ಗೆ ಕರೆಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಜೇನು ಸಾಕಾಣಿಕೆ ಬಗ್ಗೆ ತರಬೇತಿ ಮೊದಲು ಬಂದವರಿಗೆ ಅದ್ಯತೆ ನೀಡಲಾಗುವುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ತಿಳಿಸಿದ್ದಾರೆ.

