ಅತ್ಯಾಧುನಿಕ ಗ್ಲೋಬಲ್ ಕೇಪಬಲಿಟಿ ಸೆಂಟರ್ ಆರಂಭ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಏರೋಸ್ಪೇಸ್ ಶಕ್ತಿಗೆ ರೋಲ್ಸ್ ರಾಯ್ಸ್ ಬಲ. ಬೆಂಗಳೂರಿನಲ್ಲಿ ರೋಲ್ಸ್-ರಾಯ್ಸ್ ತನ್ನ ಅತಿದೊಡ್ಡ ಮತ್ತು ಅತ್ಯಾಧುನಿಕ ಗ್ಲೋಬಲ್ ಕೇಪಬಲಿಟಿ ಸೆಂಟರ್ ತೆರೆದಿದೆ.

ಏರೋಸ್ಪೇಸ್ ಮತ್ತು ಡಿಫೆನ್ಸ್ ವಿಭಾಗದ ಸಂಶೋಧನೆಯಲ್ಲಿ ಈ ಸಾಮರ್ಥ್ಯ ಕೇಂದ್ರವು ಕಾರ್ಯನಿರ್ವಹಿಸಲಿದ್ದು ಹಲವು ಆವಿಷ್ಕಾರ ಮತ್ತು ಹೊಸ ತಂತ್ರಜ್ಞಾನದ ಅವಕಾಶಗಳನ್ನು ಹೆಚ್ಚಿಸಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

- Advertisement - 

ಕರ್ನಾಟಕವು ಭಾರತದ ಮಾತ್ರವಲ್ಲದೆ ವಿಶ್ವದಲ್ಲೇ ಟಾಪ್ 3 ಏರೋಸ್ಪೇಸ್ ಕೇಂದ್ರಗಳಲ್ಲಿ ಒಂದಾಗಿದೆ. ನಮ್ಮ ಮೇಡ್ ಇನ್ ಕರ್ನಾಟಕ ಉಪಕ್ರಮಕ್ಕೆ ಇದರಿಂದ ಮತ್ತಷ್ಟು ಶಕ್ತಿ ಬಂದಿದ್ದು, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯ ಹೊಸ ದಾರಿಗಳನ್ನು ತೆರೆದಿರಿಸಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

- Advertisement - 

 

Share This Article
error: Content is protected !!
";