“ಬೆಲ್ ಬಟನ್” ಚಲನಚಿತ್ರದ ಪೋಸ್ಟರ್ ಬಿಡುಗಡೆ

?????????????
News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊಸ ವರ್ಷದ ಮೊದಲ ದಿನದಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರು
ಬೆಲ್ ಬಟನ್ಕನ್ನಡ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಬೆಂಬಲ ನೀಡಿ ಶುಭ ಹಾರೈಸಿದ್ದಾರೆ.

     ಈಗ ಯುಟ್ಯೂಬ್ ಕಾಲ. ನೀವು ಯಾವುದೇ ಯುಟ್ಯೂಬ್ ಚಾನೆಲ್ ಗೆ ಹೋಗಿ, ಅವರು ಹೇಳುವ ಮೊದಲ ವಿ?ಯ- ನೀವು ನಮ್ಮ ಚಾನೆಲ್ ಗೆ ಹೊಸಬರಾಗಿದ್ದರೆ ನಮ್ಮ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಹಾಗೆ ಬೆಲ್ ಬಟನ್ಒತ್ತೋದು ಮರೀಬೇಡಿ ಅಂತಾರೆ. ಇದ್ದನ್ನೇ ಚಿತ್ರದ ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕ ಲಕ್ಷ್ಮಿ ನರಸಿಂಹ.ಎಂ . ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ ಹಾಗೂ ರಂಗಭೂಮಿ ನಟರಾಗಿ ಅನುಭವವಿರುವ  ಲಕ್ಷ್ಮಿನರಸಿಂಹ. ಎಂ.  “ಬೆಲ್ ಬಟನ್” ಚಿತ್ರವನ್ನು ನಿರ್ದೇಶಿಸಿ ನಟನೆಯನ್ನೂ ಮಾಡಿದ್ದಾರೆ.

ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ , ಸಂಭಾ?ಣೆ ಬರೆದಿದ್ದಾರೆ. ಫ್ರೆಶ್ ಫಿಲಂಸ್ ಮೂಲಕ ಹೇಮಂತ್ ಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖರ ಬಳಿ ಕೆಲಸ ಮಾಡಿರುವ ವಿಶಾಲ್ ಆಲಾಪ್  ಅವರು ಸಂಗೀತ ನೀಡಿದ್ದಾರೆ. ಲಕ್ಕಿ ಛಾಯಾಗ್ರಹಣ ,ಎಸ್  ಆಕಾಶ್  ಮಹೇಂದ್ರಕರ್  ಸಂಕಲನ, ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ್, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ಪ್ರಚಾರಕಲೆ ದೇವು ಅವರದಿದೆ.   

   ಜೈ, ಈ ಚಿತ್ರದ ನಾಯಕ, ನಿಸರ್ಗ ಅಪ್ಪಣ್ಣ ಮತ್ತು ಚೈತ್ರಾ ಗೌಡ ನಾಯಕಿಯರಾಗಿದ್ದಾರೆ. ಪ್ರಮೀಳಾ ಸುಬ್ರಮಣ್ಯ, ಅರವಿಂದ್, ನೊಣವಿನಕೆರೆ ರಾಮಕೃ?ಯ್ಯ, ಭಾನುಪ್ರಕಾಶ್ಪವನ್ ರಿಚ್ಚಿ, ವೇಣು, ಹರೀಶ್, ಮುಂತಾದವರು ಅಭಿನಯಸಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರ ತಂಡ ಇದೆ ಜನವರಿ ೧೫ ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು  ನಿರ್ಧರಿಸಿದೆ.

ಚಿಕ್ಕಮಗಳೂರು ಸುತ್ತಮುತ್ತ ಸುಮಾರು ನಲವತ್ತು ದಿನಗಳ ಕಾಲ ಪ್ರಕೃತಿಯ ಮಡಿಲಲ್ಲಿ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ . ಚಿತ್ರ ಬಹಳ  ಉತ್ತಮವಾಗಿ ಮೂಡಿ ಬಂದಿದೆ, ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸುತ್ತೇವೆ ಎಂದು ನಿರ್ದೇಶಕ ಲಕ್ಷ್ಮಿನರಸಿಂಹ ಅವರು ಹೇಳಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";