ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾನ್ವಿ ತೈಕ್ವಾಂಡೋ ಅಕಾಡೆಮಿ ಯಲಹಂಕ ನ್ಯೂಟೌನ್ 4ನೇ ಜನವರಿ 2026, ಭಾನುವಾರ ಬೆಲ್ಟ್ ಪರೀಕ್ಷೆಯನ್ನು ನಡೆಸಿತು.
ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅರ್ಜುನ್, ಸ್ಮೃತೀ ಎಸ್‌ಎಂ, ಸಂಸ್ಕೃತ್ ಎಸ್‌ಎಂ, ಅರ್ಜುನ್, ಸಮ್ಹಿತ್ ಕೆ, ನಿಖಿಲ್ ನೆಹೆಮಾಯಾ ಅವರು ಪರೀಕ್ಷೆಯಲ್ಲಿ ಭಾಗವಹಿಸಿ ಯಶಶ್ವಿಯಾದರು.
ಮುಖ್ಯ ತರಬೇತುದಾರ ಡಾ. ಕೃಷ್ಣ ಚೈತನ್ಯ ಅವರು ಪರೀಕ್ಷೆ ನಡೆಸಿ ಫಲಿತಾಂಶ ಘೋಷಿಸಿದರು. ವಿದ್ಯಾರ್ಥಿಗಳ ಆಸಕ್ತಿ ಹಾಗೂ ಉತ್ಸಾಹವನ್ನು ನೋಡಿ ಅವರು ಸಂತೋಷ ವ್ಯಕ್ತಪಡಿಸಿದರು.ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಲಿ ಅಭಿನಂದಿಸಿದ್ದಾರೆ.

