ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿ ಈ ರೀತಿಯ ಇಂಗ್ಲೀಷ್ ಫೆಸ್ಟ್ ಗಳು ಸರ್ಕಾರಿ ಶಾಲೆಗಳಲ್ಲಿ ಆಯೋಜನೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಸುಲಭವಾಗಿ ಕಲಿಯುವುದರ ಜೊತೆಗೆ ಅವರ ಸರ್ವೋತೋಮುಖ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಸಲಹೆ ನೀಡಿದರು.
ನಂತರ ಮಕ್ಕಳು ತಯಾರಿಸಿದ ಇಂಗ್ಲೀಷ್ ಪಾಠೋಪಕರಣಗಳನ್ನು ವೀಕ್ಷಣೆ ಮಾಡಿದರು ಹಾಗೂ ಮಕ್ಕಳು ಹೇಳುವ ವಿವರಣೆ ಗಮನಿಸಿದರು.
ಮಕ್ಕಳ ಚಟುವಟಿಕೆಗಳ ಹಾಗೂ ಶಾಲೆಯ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಆರ್ ಸಿ ಸಮನ್ವಯ ಅಧಿಕಾರಿ ಮಂಜು ಬಾಬು ಮಾತನಾಡಿ ಇಂಗ್ಲೀಷ್ ಕಲಿಕೆಯಲ್ಲಿ ಕೋಡಿಹಳ್ಳಿ ಸರ್ಕಾರಿ ಶಾಲಾ ಮಕ್ಕಳು ಕ್ರಾಂತಿಯ ಜ್ಯೋತಿ ಹಚ್ಚಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಳಕು ಹೋಬಳಿ ಇಸಿಓ ವೀರೇಶ್, ಮುಖ್ಯ ಶಿಕ್ಷಕ ರೇವಣ್ಣ, ಮಾಜಿ ಸಿ.ಆರ್.ಪಿ ವಿಷ್ಣುವರ್ಧನ್, ಚಿಕ್ಕಮ್ಮನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ್, ಶಿಕ್ಷಕರಾದ ಟಿ.ವಿ ತಿಪ್ಪೇಸ್ವಾಮಿ, ಸೋಮಶೇಖರ್, ಸುಶೀಲಾ , ಆಶಾ, ಜಿ ಟಿ ಬಸವರಾಜ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ್ ಉಪಾಧ್ಯಕ್ಷೆ ಸ್ವಾತಿ.ಎಚ್ ಹಾಗೂ ಸದಸ್ಯರಾದ ತಿಪ್ಪೇಸ್ವಾಮಿ, ಪ್ರಸಾದ್, ವಿಜಯ್ ಕುಮಾರ್ ,ಗ್ರಾಮದ ಮುಖಂಡರಾದ ದೊಡ್ಡ ಓಬಯ್ಯ,ಸಣ್ಣ ಓಬಯ್ಯ,ಸೋಮಶೇಖರ್, ತಿಪ್ಪೇಸ್ವಾಮಿ,
ಮೋಹನ್ ರೆಡ್ಡಿ,ಹನುಮಂತು,ಭಾರಿಮಂಜಣ್ಣ, ಭೀಮೇಶ ಶೆಟ್ಟಿ, ಲಿಂಗರಾಜು, ವಿನಯ್ ಕುಮಾರ್, ಬಸವರಾಜು, ತಿಪ್ಪೇಸ್ವಾಮಿ, ಕೋಡಿಹಳ್ಳಿ ಟಿ.ಶಿವಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಹಾಗೂ ಹಾಲಿ ಸದಸ್ಯರು, ಬಿಸಿಯೂಟ ತಯಾರಿಕಾ ಅಡುಗೆ ಸಹಾಯಕರು, ಶಾಲಾ ಸಿಬ್ಬಂದಿ ವರ್ಗದವರು, ಪೋಷಕರು, ಯುವಕರು, ಮಕ್ಕಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಕೃತಿಕಾ ಪ್ರಾರ್ಥಿಸಿದರು. ಸಿ.ಆರ್.ಪಿ ಸುರೇಶ್ ಸ್ವಾಗತಿಸಿದರು. ಶಿಕ್ಷಕಿ ಸುಪ್ರಿಯಾ.ಜೆ ನಿರೂಪಿಸಿದರು.

