ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ದೊಡ್ಡಬಳ್ಳಾಪುರ ನಗರ ಉಪವಿಭಾಗ )ಯನ್ನು ವಂಚಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿರುವವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು ಕಳೆದ ಜನವರಿ 30ರಂದು ಬೆಸ್ಕಾಂ(ದೊಡ್ಡಬಳ್ಳಾಪುರ ನಗರ ವಿಭಾಗ) ನೌಕರ ಮನು ಎಂಬುವರ ಮೇಲೆ ಮೋಸ ಹಾಗೂ ವಂಚನೆ ಆರೋಪದ ಹಿನ್ನಲೆ ದೂರು ದಾಖಲಾಗಿದ್ದು, ಪ್ರಕರಣವು ಸದ್ಯ ತನಿಖೆ ಹಂತದಲ್ಲಿದೆ.
ದೊಡ್ಡಬಳ್ಳಾಪುರ ಬೆಸ್ಕಾಂ ಸಂಸ್ಥೆಯಲ್ಲಿ ಕೇವಲ ಮನು ಅಷ್ಟೇ ಅಲ್ಲ ಕೆಲ ನೌಕರರು, ಗುತ್ತಿಗೆದಾರರು ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಅಲ್ಲದೇ ಕೆಲವು ಶಾಖಾ ಅಧಿಕಾರಿಗಳು ಖಾಸಗಿ ಕೆಲಸಗಳನ್ನು ಪಡೆದು ಆಯ್ದ ಕೆಲ ಗುತ್ತಿಗೆದಾರರಿಗೆ ನೀಡಿ ಬಂದ ಹಣದಲ್ಲಿ ಭಾಗಂಶ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಈ ಕುರಿತು ತನಿಖೆ ಕೈಗೊಳ್ಳುವ ಅಗತ್ಯವಿದೆ.
ಏನಿದು ಪ್ರಕರಣ?
ತಾಲ್ಲೂಕಿನ ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ) ನೌಕರ ಮನು ಎಂಬುವರು ಕಳೆದ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ, ವಿದ್ಯುತ್ ಮೀಟರ್ ಅಳವಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು. ಹಲವು(30ಕ್ಕೂ ಅಧಿಕ)ಬೆಸ್ಕಾಂ ಅನುಮತಿಯಿಲ್ಲದೇ ಮೀಟರ್ ಅಳವಡಿಕೆ ಮಾಡಿ ವಿದ್ಯುತ್ ಕಳ್ಳತನ ಮಾಡಲು ಸಹಕರಿಸಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯದಲ್ಲಿ ಕೇಳಿಬಂದ ಹಿನ್ನಲೆ ಅವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಬೆಸ್ಕಾಂ ವತಿಯಿಂದ ದೂರು ದಾಖಲು ಮಾಡಲಾಗಿದೆ.
ನಿಮಗೆ ವಿದ್ಯುತ್ ಬಿಲ್ ಬರುತ್ತಿಲ್ಲವೇ ಹಾಗಾದರೆ ಎಚ್ಚರ-
ಪ್ರತಿ ತಿಂಗಳು ವಿದ್ಯುತ್ ಬಿಲ್ ಬರುವುದು ಸರ್ವೇ ಸಾಮಾನ್ಯ, ನಿಮ್ಮ ವಿದ್ಯುತ್ ಮೀಟರ್ ಸಂಬಂಧ ಮೂರ್ನಾಲ್ಕು ತಿಂಗಳು ವಿದ್ಯುತ್ ಬಳಕೆಯ ಬಿಲ್ ಬರಲಿಲ್ಲವೆಂದರೆ ಕೂಡಲೇ ನಿಮ್ಮ ಹತ್ತಿರದ ಬೆಸ್ಕಾಂ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಬೆಸ್ಕಾಂ ದೃಡೀಕರಿಸದ ಮೀಟರ್ ಅಳವಡಿಕೆ ನಿಮ್ಮನ್ನು ಜೈಲು ವಾಸಕ್ಕೆ ಅಥವಾ ದಂಡ ಕಟ್ಟುವಂತೆ ಮಾಡಬಹುದು. ಬಿಲ್ ಬರುತ್ತಿಲ್ಲ ಎಂಬ ಸಂತೋಷ ಬೇಡ ಕೂಡಲೇ ಎಚ್ಚೆದ್ದುಕೊಳ್ಳಿ ನಿಮ್ಮ ವಿದ್ಯುತ್ ಮೀಟರ್ ಅನ್ನು ಬೆಸ್ಕಾಂ ನಿಂದ ದೃಷ್ಟಿಕರಿಸಿಕೊಳ್ಳಿ ವಂಚನೆ ಮೋಸಗಳಿಂದ ಪರಾಗಿ..ಅಧಿಕಾರಿಗಳನ್ನು ನೇರ ಸಂಪರ್ಕ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.
ಅಧಿಕೃತವಲ್ಲದ ವಿದ್ಯುತ್ ಮೀಟರ್ ಅಳವಡಿಸಿ ವಿದ್ಯುತ್ ಕಳ್ಳತನಕ್ಕೆ ಅನುವು ಮಾಡಿಕೊಟ್ಟಿರುವ ಮನು ಅವರ ವಿರುದ್ದ ಬೆಸ್ಕಾಂ ಸಂಸ್ಥೆ ಏನು ಕ್ರಮ ಕೈಗೊಳ್ಳಲಿದೆ ಸಂಸ್ಥೆಗೆ ಆಗಿರುವ ನಷ್ಟ ಹೇಗೆ ಹಿಂಪಡೆಯಲಿದೆ ಸಂಸ್ಥೆಗೆ ವಂಚಿಸಿರುವವರ ವಿರುದ್ಧ ಕಾನೂನು ಕ್ರಮ ನೆಡೆಯುವುದೇ ಎಂದು ಸಾಮಾಜಿಕ ವಲಯದಲ್ಲಿ ಮೂಡಿರುವ ಪ್ರಶ್ನೆಗಳಿಗೆ ಉತ್ತರ ಕಾದುನೋಡಬೇಕಿದೆ.

