ಬೆಸ್ಕಾಂ ಇಇ ತಿಮ್ಮರಾಯಪ್ಪ ಲಂಚ ಪಡೆಯುವಾಗ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಭಾಗದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಬರೊಬ್ಬರಿ 3.50 ಲಕ್ಷ ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲಂಚದ ಹಣ ಸಮೇತ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ನಗರದಲ್ಲಿ ಗುರುವಾರ ಜರುಗಿದೆ.

ಚಿತ್ರದುರ್ಗ ವಿಭಾಗದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ 3.50 ಲಕ್ಷ ರೂ. ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

- Advertisement - 

35 ಲಕ್ಷ ರೂ.ಗಳ ಕಾಮಗಾರಿಯ ಟೆಂಡರ್ ಗುತ್ತಿಗೆ ನೀಡಲು ಶೇ. 10ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ತಿಮ್ಮರಾಯಪ್ಪನ ವಿರುದ್ಧ ಬೆಸ್ಕಾಂ ಗುತ್ತಿಗೆದಾರ(ಕಂಟ್ರಾಕ್ಟರ್) ಸಂಜಯ್ ಎನ್ನುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಸಂಜಯ್ ನೀಡಿದ ದೂರು ಆಧರಿಸಿ ಬುಧವಾರ ರಾತ್ರಿ ತಿಮ್ಮರಾಯಪ್ಪ ವಿರುದ್ದ FIR ದಾಖಲು ಮಾಡಿಕೊಳ್ಳಲಾಗಿತ್ತು.
ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ಚಿತ್ರದುರ್ಗದ ಟೀಚರ್ಸ್ ಕಾಲೋನಿಯ ತಿಮ್ಮರಾಯಪ್ಪನ ಮನೆ ಬಳಿ ಲಂಚ ಪಡೆಯುತ್ತಿರುವ ಸಂದರ್ಭದಲ್ಲೇ ಬೆಸ್ಕಾಂ ಇಇ
ತಿಮ್ಮರಾಯಪ್ಪ ಲೋಕಾಯುಕ್ತರ ದಾಳಿಗೆ ಒಳಗಾಗಿದ್ದು ಲಂಚದ ಹಣ ರಿಕವರಿ ಮಾಡಿ ತಿಮ್ಮರಾಯಪ್ಪನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

- Advertisement - 

ಇಇ ಕಾರ್ಯವ್ಯಾಪ್ತಿ-
ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳನ್ನೊಳಗೊಂಡ ಚಿತ್ರದುರ್ಗ ವಿಭಾಗದಲ್ಲಿ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಾಗಿ ತಿಮ್ಮರಾಯಪ್ಪ ಅವರು ವರ್ಷದಿಂದ ಸೇವೆ ಸಲ್ಲುತ್ತಿದ್ದರು. ಇವರು ಮೂಲತಃ ಹಿರಿಯೂರು ತಾಲೂಕಿನವರಾಗಿದ್ದಾರೆ. ಈ ಹಿಂದೆ ಹಿರಿಯೂರು ಬೆಸ್ಕಾಂ ವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಚಿತ್ರದುರ್ಗ ವಿಭಾಗದಲ್ಲಿ ಇಇ ಆಗಿ ಸೇವೆ ಸಲ್ಲಿಸುತ್ತಿದ್ದರು.

ಪತ್ರಿಕಾ ಹೇಳಿಕೆ-
ಚಿತ್ರದುರ್ಗ ಮತ್ತು ಹಿರಿಯೂರು ವಿಭಾಗದಲ್ಲಿ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 15 ಸಾವಿರ ಮೇಲ್ಪಟ್ಟು ಪ್ರತಿ ರೈತರಿಂದ ಲಂಚಕ್ಕೆ ಬೇಡಿಕೆ ಇಡಲಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಬೆಸ್ಕಾಂ ಮುಖ್ಯ ಇಂಜಿನಿಯರ್ ಅವರು ಪತ್ರಿಕಾ ಹೇಳಿಕೆ ನೀಡಿ ಆ ರೀತಿ ಬೆಸ್ಕಾಂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ದೂರು ನೀಡುವಂತೆ ಇತ್ತೀಚೆಗೆ ಪತ್ರಿಕಾ ಹೇಳಿಕೆ ನೀಡಿ ಮನವಿ ಮಾಡಿದ್ದರು. ಇದರ ಬೆನ್ನ ಹಿಂದೆಯೇ ಇಇ ತಿಮ್ಮರಾಯಪ್ಪ ಲೋಕಾಯುಕ್ತ ದಾಳಿಗೆ ಒಳಗಾಗಿರುವುದು ಅಚ್ಚರಿ ಮೂಡಿಸಿದೆ.

Share This Article
error: Content is protected !!
";