16.50 ಲಕ್ಷ ಲಂಚ ಸ್ವೀಕರಿಸುವಾಗ ಲೋಕಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
  ವಿದ್ಯುತ್ ಸರಬರಾಜು ಸಂಸ್ಥೆಯ ಹೊಸಕೋಟೆ  ವಿಭಾಗ ಆವಲಹಳ್ಳಿ ಉಪ ವಿಭಾಗ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ  ರಮೇಶ್ ಬಾಬು ಮತ್ತು ಕಿರಿಯ ಅಭಿಯಂತರರು ನಾಗೇಶ್  ಕಾರ್ಯ ಮತ್ತು ಪಾಲನ ಘಟಕ ಮಂಡೂರು ಇವರಿಬ್ಬರೂ ಸೇರಿ ಬೆಸ್ಕಾಂ ಇತಿಹಾಸದಲ್ಲಿ ಕೇಳರಿಯದಂತಹ ಭ್ರಷ್ಟಾಚಾರ ಕೂಪದಲ್ಲಿ 16,50,000ಗಳನ್ನು ಲಂಚವನ್ನು ಸ್ವೀಕರಿಸುವಾಗ ಇವರಿಬ್ಬರೂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇಲಾಖೆಯಲ್ಲಿ ದಿನಾಂಕ 22 10 2024 ಮಂಗಳವಾರದಂದು ಕೇವಲ ಎರಡು ದಿನ ಹಿಂದಷ್ಟೇ ಜಸ್ಟಿಸ್ ಲೋಕಾಯುಕ್ತ ಅಧಿಕಾರಿಗಳು ಕಛೇರಿಗೆ ಬೇಟಿ ನೀಡಿ ಬೆಸ್ಕಾಂ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದರು ಇದಾದ ಮೇಲೂ ಸಹ ಲಂಚವನ್ನು ಸ್ವೀಕರಿಸುವಾಗ ಸಿಕ್ಕಿಬಿದ್ದಿರುವುದು ವಿಪರ್ಯಾಸ.

- Advertisement -  - Advertisement -  - Advertisement - 
Share This Article
error: Content is protected !!
";