ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನವದೆಹಲಿಯ ವಿಜ್ಞಾನ ಭವನದಲ್ಲಿ ಕಂದೀಲು ಸಿನಿಮಾ ಫೀಚರ್‌ಫಿಲ್ಮ್ಸ್‌ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.
ಕೊನೆಗೂ ಕಾಯುವಿಕೆ ಅಂತ್ಯಗೊಂಡಿದೆ. 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ, (ಸೆಪ್ಟಂಬರ್ 23, 2025) ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ‘ಕಂದೀಲು‘ ಸಿನಿಮಾಗೆ ಫೀಚರ್‌ಫಿಲ್ಮ್ಸ್‌ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿದೆ.
ಆಗಸ್ಟ್-1ರಂದು ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಹೆಸರು ಘೋಷಣೆಯಾಗಿತ್ತು.
ಪ್ರಾದೇಶಿಕ ಸಿನಿಮಾ ವಿಭಾಗಗಳಲ್ಲಿ ಕನ್ನಡ ಸೇರಿ ಒಟ್ಟು 13 ಪ್ರಾದೇಶಿಕ ಭಾಷೆಗಳ 13 ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆ ಪೈಕಿ ‘ಕಂದೀಲು‘ ಸಿನಿಮಾ ಕೂಡಾ ಒಂದು. ಫೀಚರ್‌ಫಿಲ್ಮ್ಸ್‌ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ.
ಯಶೋದ ಪ್ರಕಾಶ್ ಕೊಟ್ಟುಕತ್ತೀರ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ರಾಷ್ಟ್ರಪ್ರಶಸ್ತಿ ಘೋಷಣೆ ಬಳಿಕ ನಿರ್ದೇಶಕಿ ಯಶೋದ ಪ್ರಕಾಶ್ ಕೊಟ್ಟುಕತ್ತೀರ ಅವರು ಅಭಿಪ್ರಾಯ ಹಂಚಿಕೊಂಡಿದ್ದರು. ನಮ್ಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿರೋದು ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದರು. ಮಡಿಕೇರಿ ಮೂಲದವರಾದ ಯಶೋದ ಪ್ರಕಾಶ್ ಕೊಟ್ಟುಕತ್ತೀರ ಈ ಕಂದೀಲು ಸಿನಿಮಾವನ್ನು ನಿರ್ದೇಶಿಸುವ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ನಾನು ಕೊಡಗು ಮೂಲದವಳು. ನಮ್ಮ ಕೊಡಗು ಪರಂಪರೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾಗಳ ಮೂಲಕ ಪರಿಚಯಿಸಬೇಕೆಂಬುದೇ ನನ್ನ ಆಸೆ. 2017ರಲ್ಲಿ ಕೊಡವ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆ. ಕಂದೀಲು ಲೇಖಕ ನಾಗೇಶ್ ಎಂಬುವರ ಕಥಾಸಂಕಲನದ ‘ಹೆಣ‘ ಕಥೆಯಿಂದ ತೆಗೆದುಕೊಂಡಿರೋದಾಗಿದೆ ಎಂದು ತಿಳಿಸಿದ್ದರು.
ಈ ಸಿನಿಮಾಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬರುತ್ತಾ ಅನ್ನೋ ನಂಬಿಕೆ ಇತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಯಶೋದ ಅವರು ”ನಾನು ಯಾವುದೇ ಕೆಲಸ ಮಾಡಿದ್ರು ಅದಕ್ಕೆ ಸಂಪೂರ್ಣ ಶ್ರಮ ಹಾಕುತ್ತೇನೆ. ಅದೇ ರೀತಿ ಈ ಸಿನಿಮಾವನ್ನೂ ಬಹಳ ಶ್ರದ್ಧೆಯಿಂದ ಮಾಡಿದೆ. ನಿಜ ಹೇಳಬೇಕೆಂದರೆ ನಮ್ಮ ಸಿನಿಮಾಗೆ ನ್ಯಾಷನಲ್ ಆವಾರ್ಡ್ ಬರುತ್ತದೆ ಅಂತಾ ಅಂದುಕೊಂಡಿರಲಿಲ್ಲವೆಂದು ತಿಳಿಸಿದ್ದರು.
ಆಗಸ್ಟ್ 1, 2025ರಂದು ಘೋಷಿಸಲಾದ ಪ್ರಶಸ್ತಿಗಳು, 2023ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ಸಂದ ಗೌರವವಾಗಿದೆ. ಕೋವಿಡ್ ಹಿನ್ನೆಲೆ, ಪ್ರಶಸ್ತಿ ಪ್ರದಾನ ಸಮಾರಂಭ ಎರಡು ವರ್ಷ ವಿಳಂಬವನ್ನೆದುರಿಸಿದ್ದು, ನಿಮಗೆ ತಿಳಿದೇ ಇದೆ. ಈ ವರ್ಷ, ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವ ಸಂದಿದೆ.

