ದಾವಣಗೆರೆ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ ‘ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್’ ರಾಷ್ಟ್ರೀಯ ಪ್ರಶಸ್ತಿ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಐದಂತಸ್ತಿನ ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ
ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.

ಹಳೇ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಸ್ಮಾರ್ಟ್ ಸಿಟಿ ಯೋಜನೆಯ 90 ಕೋಟಿ ಅನುದಾನ ಮತ್ತು ಕೆಎಸ್ಆರ್​ಟಿಸಿ ನಿಗಮದ 30 ಕೋಟಿ ಅನುದಾನ ಸೇರಿ ಒಟ್ಟು 120 ಕೋಟಿ ಅನುದಾನ ಬಳಸಿಕೊಂಡು ಅತ್ಯುತ್ತಮ ಮೂಲ ಸೌಕರ್ಯಗಳುಳ್ಳ ಐದಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ.

ಏಕಕಾಲದಲ್ಲಿ 46 ಬಸ್​ ನಿಲುಗಡೆ:
ದಾವಣಗೆರೆ ನಗರದಲ್ಲಿ
9 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ಸಿದ್ದಗೊಂಡಿದ್ದು, ನಿಲ್ದಾಣದಲ್ಲಿ ಎರಡು ಶಾಪಿಂಗ್ ಮಾಲ್​ಗಳು, ಮೂರು ಸಿನಿಮಾ ಥಿಯೇಟರ್​ಗಳು ಹಾಗೂ ಆರು ಲಿಫ್ಟ್ ಸೇರಿದಂತೆ ಎರಡು ಎಸ್ಕಲೇಟರ್ ವ್ಯವಸ್ಥೆ ಮಾಡಲಾಗಿದೆ.‌ಬಸ್ ನಿಲ್ದಾಣದಲ್ಲಿ ಒಂದೇ ಬಾರಿಗೆ 46 ಬಸ್​ಗಳು ನಿಲುಗಡೆ ಮಾಡಬಹುದಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ. ಉಪಾಹಾರ, ಊಟ ಸೇವಿಸಲು ಹೋಟೆಲ್ ವ್ಯವಸ್ಥೆ ಸಹ ಮಾಡಲಾಗಿದೆ.

ಅತ್ಯುತ್ತಮ ಪಾರ್ಕಿಂಗ್​:
ಬಸ್ ನಿಲ್ದಾಣದಲ್ಲಿ ಏಕಕಾಲದಲ್ಲಿ ಸಾರ್ವಜನಿಕರ
500 ದ್ವಿಚಕ್ರ ಹಾಗೂ 104 ಕಾರುಗಳನ್ನು ನಿಲ್ಲಿಸಬಹುದಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಈ ನಿಲ್ದಾಣದಲ್ಲಿರುವ ಮಾಲ್, ಸಿನಿಮಾ ಥಿಯೇಟರ್ ಹಾಗೂ ಉಳಿದ ಕಾಂಪ್ಲೆಕ್ಸ್​ಗಳಿಂದ ಬರುವ ಆದಾಯದಲ್ಲಿ ಶೇ.50 ರಷ್ಟು ಸ್ಮಾರ್ಟ್​ಸಿಟಿಗೆ, ಉಳಿದ ಶೇ.50 ರಷ್ಟು ಕೆಎಸ್ಆರ್​ಟಿಸಿಗೆ ಸೇರಬೇಕು ಎಂದು ಒಪ್ಪಂದ ಮಾಡಿಕೊಂಡು ನಿರ್ವಹಣೆ ಮಾಡಲಾಗಿದೆ.

ಸ್ಮಾರ್ಟ್​ ಸಿಟಿ ಎಂಡಿ: ಸ್ಮಾರ್ಟ್ ಸಿಟಿ ನಿರ್ವಹಣೆಯ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್ ಮಾತನಾಡಿ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ರೀಜನಲ್ ಅವಾರ್ಡ್ ಸಿಕ್ಕಿದೆ. ಬಸ್ ನಿಲ್ದಾಣದಲ್ಲಿ ಜನರಿಗೆ ಸಿಗುತ್ತಿರುವ ಮೂಲ ಸೌಕರ್ಯಗಳು ಹಾಗೂ ಬಸ್ ನಿಲ್ದಾಣದ ಆಕಾರ ಚೆನ್ನಾಗಿ ಮೂಡಿ ಬಂದಿರುವುದರಿಂದ ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್ರಾಷ್ಟ್ರಮಟ್ಟದ ಅವಾರ್ಡ್ ಬಂದಿದ್ದು ಸಂತಸ ಸಡಗರ ಮನೆ ಮಾಡಿದೆ. ರಾಷ್ಟ್ರೀಯ ಮಟ್ಟದ ಪ್ರಶಸ್ತಿ ತಮ್ಮನ್ನು ಮತ್ತೊಷ್ಟು ಎಚ್ಚರಗೊಳಿಸಿದೆ ಎಂದು ಅವರು ತಿಳಿಸಿದರು.

 ಹೋರಾಟಗಾರ ಆವರೆಗೆರೆ ವಾಸು ಮಾತನಾಡಿ ದಾವಣಗೆರೆ ನಗರದಲ್ಲಿ ಹೊಸ ಬಸ್ ನಿಲ್ದಾಣ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಇದಕ್ಕೆ ರಾಷ್ಟ್ರೀಯ ಬೆಸ್ಟ್ ಇನ್​​​ಫ್ರಾಸ್ಟ್ರಕ್ಚರ್ಅರ್ವಾಡ್ ಬಂದಿದೆ‌. ಪ್ರಶಸ್ತಿ ಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಈ ಹಿಂದೆ ದಾವಣಗೆರೆಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ದಿ. ಕಾಮ್ರೇಡ್ ಪಂಪಾಪತಿ ಅವರ ಹೋರಾಟ ಅವಿಸ್ಮರಣೀಯ. ಅವರ ಹೆಸರನ್ನು ನಿಲ್ದಾಣಕ್ಕೆ ಇಡಬೇಕು ಎಂದು ಅವರು ಆಗ್ರಹ ಮಾಡಿದರು.

 

- Advertisement -  - Advertisement - 
Share This Article
error: Content is protected !!
";