ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುಗಳ ಕೆಚ್ಚಲಿಗೆ ಬ್ಲೇಡ್‌ಹಾಕಿದ ಮತಾಂಧ ಸೈಯ್ಯದ್ ನಸ್ರುನಿಗೆ ಮಾನಸಿಕ ಅಸ್ವಸ್ಥ ಪಟ್ಟ ಕಟ್ಟಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ತನಿಖೆ ಮಾಡದೆ ಮುಚ್ಚಿ ಹಾಕಲು ಯತ್ನಿಸಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಹಸುಗಳ ಕೆಚ್ಚಲಿಗೆ ಬ್ಲೇಡ್‌ಹಾಕಲು ಸುಪಾರಿ ಕೊಟ್ಟವರು ಯಾರು ಎಂದು ಹೇಳಬೇಕಾದ ಸಚಿವ ಜಮೀರ್ ಅಹಮದ್ ಖಾನ್ ಅವರು ಹಸುಗಳನ್ನು ನೀಡಿ ಕರ್ಣನ ಕುಟುಂಬಸ್ಥರ ಕಣ್ಣಿಗೆ ಬೆಣ್ಣೆ ಹಚ್ಚಲು ಯತ್ನಿಸಿದ್ದಾರೆ. ಆದರೆ, ಹಸು ಮಾಲೀಕ ಕರ್ಣ ಜಮೀರ್‌ಅವರು ನೀಡಿದ ಹಸುಗಳನ್ನು ತಿರಸ್ಕರಿಸಿದ್ದಾರೆ.
ಕಳೆದ 10 ವರ್ಷಗಳಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮತಾಂಧ ಸೈಯ್ಯದ್‌ನಸ್ರು ಮಾನಸಿಕ ಅಸ್ವಸ್ಥನಾಗಿರಲು ಹೇಗೆ ಸಾಧ್ಯ? ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮೊದಲು ಮಾನಸಿಕ ಅಸ್ವಸ್ಥತೆಯಿಂದ ಹೊರ ಬಂದರೆ, ರಾಜ್ಯದಲ್ಲಿ ನಡೆದ ಎಲ್ಲಾ ಪ್ರಕರಣಗಳಿಗೆ ನ್ಯಾಯ ಸಿಗಲಿದೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.