ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೋಡುಗರ ಕಣ್ಣು ಸೋಲಿಸಬಹುದು ಆದರೆ ಕೊಡುವವನ ಕೈ ಯಾವತ್ತು ಸೋಲುವುದಿಲ್ಲ ಎಂದು ಕೆಂಪೇಗೌಡ ಯುವಶಕ್ತಿ ವೇದಿಕೆ ಅಭಿಪ್ರಾಯಪಟ್ಟಿದೆ.
ಕೆಂಪೇಗೌಡ ಯುವಶಕ್ತಿ ವೇದಿಕೆ ಹಾಗೂ ಕೆಂಪೇಗೌಡ ಮಹಿಳಾ ಘಟಕ ಹರಿಯಬ್ಬೆ ಸಂಘಕ್ಕೆ ಒಕ್ಕಲಿಗ ಸಂಘದ ಬೇತೂರು ಪಾಳ್ಯ ಜೆ. ರಾಜು ಅವರು ಹರಿಯಬ್ಬೆ ಗ್ರಾಮದಲ್ಲಿ ನಾಡ ಪ್ರಭು ಕೆಂಪೇಗೌಡ ಪುತ್ಥಳಿ ಅನಾವರಣ ಮಾಡಲು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಕೆಂಪೇಗೌಡ ಯುವಶಕ್ತಿ ವೇದಿಕೆ ಹರಿಯಬ್ಬೆ ವತಿಯಿಂದ ರಾಜು ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಮ್ಮ ಸೇವೆ ಕಾಣದ ಕೈಗಳ ತರ ನೆಡೆಯುತ್ತಿದೆ ಭಗವಂತ ತಾವುಗಳು ಮಾಡುವ ಜನ ಸೇವೆಗಾಗಿ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಿ.ನವೀನ್ ಕುಮಾರ್, ಆರ್.ದಯಾನಂದ್, ಮಾಜಿ ತಾಪಂ ಅಧ್ಯಕ್ಷೆ ಅರುಣಮ್ಮ, ಜಿ.ಸಿ ಕಾಂತರಾಜ್, ಅಶ್ವಥ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

