ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ದುಗ್ಗಾವರ ರಸ್ತೆಯ ಶ್ರೀರಂಗಮಿಲ್‌ಗಳಿ ರಸ್ತೆ ಪಕ್ಕದ ವಿದ್ಯುತ್ ಕಂಬಗಳಿಗೆ ಕೆಳಗಿನಿಂದ ಮೇಲಿನವರೆಗೂ ಬಳ್ಳಾರಿ ಜಾಲಿ, ಬಳ್ಳಿ ಹಬ್ಬಿದ್ದು, ಇದು ಪ್ರಾಣಾಪಾಯಕ್ಕೆ ಕಾರಣವಾಗುತ್ತಿದೆ.
ಬೆಸ್ಕಾಂ ಇಲಾಖೆ ಅಧಿಕಾರಿಗಳು ಕೂಡಲೇ ಕಂಬಗಳಿಗೆ ಅಂಟಿಕೊಂಡ ಬಳ್ಳಿಯನ್ನು ತೆರವುಮಾಡಿಸಬೇಕೆಂದು ರೈತ ಸಂಘದ ಹಿರಿಯ ಮುಖಂಡ ರೆಡ್ಡಿಹಳ್ಳಿವೀರಣ್ಣ ಮನವಿ ಮಾಡಿದ್ಧಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಕಲ್ಯಾಣದುರ್ಗ ರಸ್ತೆಯ ಮಿಲ್‌ನ ಎರಡೂ ಭಾಗದಲ್ಲಿರುವ ವಿದ್ಯುತ್ ಕಂಬಗಳಿಗೆ ಬಳ್ಳಾರಿ ಜಾಲಿ ಹಾಗೂ ಬಳ್ಳಿ ಸುತ್ತಿಕೊಂಡಿದೆ. ಕಂಬದ ಸುತ್ತಾ ಯಾರಾದರೂ ಓಡಾಟ, ಪ್ರಾಣಿ ಓಡಾಟ ನಡೆಸಿದರೆ ಶಾಕ್ ಹೊಡೆಯುವ ಸಂಭವವಿದೆ.
ಇದರಿಂದ ಪ್ರಾಣಕ್ಕೆ ಅಪಾಯ ತಪ್ಪಿದ್ದಲ್ಲ, ಆದರೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ನಿರ್ಲಕ್ಷೆತೋರಿರುವುದು ಸರಿಯಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಜಾಲಿ ಹಾಗೂ ಬಳ್ಳಿಗಳು ಹಸಿಯಾಗಿದ್ದು ಕಂಬದ ಮೇಲ್ಭಾಗಕ್ಕೆ ತಾಕೀದಲ್ಲಿ ಮಾತ್ರ ಇಡೀ ಗಿಡ, ಬಳ್ಳಿಯಲ್ಲಿ ವಿದ್ಯುತ್‌ಪ್ರಸರಣವಾಗುತ್ತದೆ. ಆಕಸ್ಮಿಕವಾಗಿ ಯಾರಾದರೂ ಬಳ್ಳಿಯನ್ನು ಮುಟ್ಟಿದರೆ ವಿದ್ಯುತ್ ಶಾಕ್‌ನಿಂದ ಮೃತಪಡುವ ಸಂಭವವಿದೆ.
ಕಳೆದ ಕೆಲವು ತಿಂಗಳಿನಿಂದ ಇದೇ ಪರಿಸ್ಥಿತಿ ಇದ್ದರೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳದೇ ಮೌನವಾಗಿದ್ಧಾರೆ. ಸಾರ್ವಜನಿಕ ಹಿತದೃಷ್ಠಿಯಿಂದ ಕೂಡಲೇ ಕಂಬದ ತುಂಬ ವ್ಯಾಪಿಸಿರುವ ಜಾಲಿ, ಬಳ್ಳಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.